ಪೈವಳಿಕೆ: ಲೋಕಸಭಾ ಸದಸ್ಯರಾಗಿದ್ದ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಐ. ರಾಮ ರೈ ಅವರ ಸಂಸ್ಮರಣೆ ಅಂಗವಾಗಿ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪುಷ್ಪಾರ್ಚನೆ ನಡೆಸಲಾಯಿತು. ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಸಂಸ್ಮರಣೆ ಭಾಷಣ ಮಾಡಿದರು. ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ಮೋಹನ ರೈ ಕಯ್ಯಾರು, ನಾರಾಯಣ ಏದಾರು, ಕಾರ್ಯದರ್ಶಿಗಳಾದ ರಾಘವೇಂದ್ರ ಭಟ್, ಸಚ್ಚಿದಾನಂದ ರೈ, ಮಂಡಲ ಪದಾಧಿಕಾರಿಗಳಾದ ಶಾಜಿ ಎನ್.ಸಿ, ಶಿವರಾಮ ಶೆಟ್ಟಿ, ಗಂಗಾಧರ ನಾಯ್ಕ, ಎಡ್ವರ್ಡ್, ಜೋಯ್ ಕಯ್ಯಾರು, ಚನಿಯಪ್ಪ ಉಪಸ್ಥಿತರಿದ್ದರು.







