ಕಾಸರಗೋಡು: ಜನವರಿ 26ರ ಗಣರಾಜ್ಯ ದಿನಾಚರಣೆಗೆ ಜಿಲ್ಲೆಯಲ್ಲಿ ವಿಪುಲ ಸಿದ್ಧತೆ ನಡೆಸಲಾಗಿದೆ. ಅಂದು ಬೆಳಿಗ್ಗೆ ವಿದ್ಯಾನಗರ ನಗರಸಭಾ ಮೈದಾನದಲ್ಲಿ ನಡೆಯುವ ದಿನಾಚರಣೆಯಲ್ಲಿ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಸಚಿವ ಎ.ಕೆ. ಶಶೀಂದ್ರನ್ ರಾಷ್ಟ್ರೀಯ ಧ್ವಜಾರೋಹಣಗೈ ಯ್ಯುವರು. ಪರೇಡ್ನಲ್ಲಿ ವೀಕ್ಷಿಸುವ ಅವರು ಬಳಿಕ ರಿಪಬ್ಲಿಕ್ ದಿನ ಸಂದೇಶ ನೀಡುವರು. ಇಂದು ಬೆಳಿಗ್ಗೆ ವಿದ್ಯಾನಗರ ಮೈದಾನದಲ್ಲಿ ಸಮವಸ್ತ್ರ ಧರಿಸಿರುವ ಪರೇಡ್ ರಿಹರ್ಸಲ್ ನಡೆಯಿತು. ಎಆರ್ ಕ್ಯಾಂಪ್ ಅಸಿಸ್ಟೆಂಟ್ ಕಮಾಂಡೆಂಟ್ ನೇತೃತ್ವ ನೀಡುವರು. ಪ್ಲಾಸ್ಟಿಕ್ ಮುಕ್ತವಾಗಿ ಪ್ರೊಟೋಕಾಲ್ ಪಾಲಿಸಿಕೊಂಡು ಕಾರ್ಯಕ್ರಮ ನಡೆಯಲಿದೆ. ಪರೇಡ್ನಲ್ಲಿ ವಿವಿಧ ಪ್ಲಾಟೂನ್ಗಳು ಭಾಗವಹಿಸಲಿದೆ. ಶಾಸಕರು, ಸಂಸದ, ಜಿಲ್ಲಾ ಪಂಚಾಯತ್ ಜನಪ್ರತಿನಿಧಿಗಳು ಭಾಗವಹಿಸುವರು.







