ನಗರದ ವಸತಿಗೃಹದಲ್ಲಿ ಪಾಲಕುನ್ನು ನಿವಾಸಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ನಗರದ ಬ್ಯಾಂಕ್ ರಸ್ತೆ ಬಳಿಯ  ವಸತಿಗೃಹವೊಂದರಲ್ಲಿ  ಕೊಠಡಿ ಪಡೆದುಕೊಂಡ ಪಾಲಕುನ್ನು ನಿವಾಸಿ ಸಾವನ್ನಪ್ಪಿದ ಸ್ಥಿತಿಯಲ್ಲಿ   ಪತ್ತೆಯಾಗಿದ್ದಾರೆ. ಪಾಲಕುನ್ನು ಕುರುಕನ್‌ಕುನ್ನು  ಕೋಟಪ್ಪಾರ ನಿವಾಸಿ  ಟಿ. ಬಾವ-ದೈನಾಬಿ ದಂಪತಿ ಪುತ್ರ ಹಮೀದ್ ಕೆ (52) ಮೃತಪಟ್ಟ ವ್ಯಕ್ತಿ. ಇವರು ಮೊನ್ನೆ ಈ ವಸತಿಗೃಹದ ಕೊಠಡಿ ಬಾಡಿಗೆಗೆ ಪಡೆದುಕೊಂಡಿದ್ದರು.  ಅವರು ಕೊಠಡಿಯಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ವಸತಿಗೃಹದವರು  ಪರಿಶೀಲಿಸಿದಾಗ ಕೊಠಡಿಯೊಳಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. ವಿಷಯ ತಿಳಿದು ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹದ ಮಹಜರು ನಡೆಸಿದ ಬಳಿಕ ಅದನ್ನು ಜನರಲ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮೃತರು ಹೆತ್ತವರ ಹೊರತಾಗಿ ಪತ್ನಿ ರಮ್ಲ, ಮಕ್ಕಳಾದ ತೌಶೀದ್,ಸಮೀರ್,ರಂಶೀದ್, ಸಹೋದರ-ಸಹೋದರಿಯರಾದ ಬಶೀರ್, ಆಯಿಷ, ಬೀವಿ,ಸಕೀನ, ಸೊಸೆ ಮುರ್ಶಿದಾ ಉನೈಸ, ಅಳಿಯ ಶಾಫಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page