ಕುಂಬಳೆ: ಕೆಳಗಿನ ಉಳುವಾರು ನಿವಾಸಿ ಅಬ್ದುಲ್ ರಹ್ಮಾನ್ ಕೆ.ವಿ. (60) ಕುವೈಟ್‌ನಲ್ಲಿ ನಿಧನರಾದರು. ಕಳೆದ 40 ವರ್ಷಗಳಿಂದ ಕುವೈಟ್‌ನಲ್ಲಿ ಉದ್ಯೋಗದಲ್ಲಿರುವ ಇವರು ಮೂರು ತಿಂಗಳ ಹಿಂದೆ ಊರಿಗೆ ಬಂದು ಮರಳಿದ್ದರು. ಬಳಿಕ ಅಲ್ಲಿನ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆದು ವಿಶ್ರಾಂತಿಯಲ್ಲಿದ್ದರು. ಈ ವೇಳೆ ನಿಧನ ಸಂಭವಿಸಿದ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ. ಮೃತದೇಹವನ್ನು ಊರಿಗೆ ತರಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ.
ಮೃತರು ಪತ್ನಿ ಆಯಿಷಾ, ಪುತ್ರಿ ತಾಹಿರ, ಅಳಿಯ ಉಸ್ಮಾನ್, ಸಹೋದರ ಸಹೋದರಿಯರಾದ ಮುಹಮ್ಮದ್, ಇಬ್ರಾಹಿಂ, ಖದೀಜ, ಆಯಿಷ, ಸೈನಬ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನಿಬ್ಬರು ಸಹೋದರರಾದ ಅಂದುಞಿ ಹಾಗೂ ಅಬ್ಬಾಸ್ ಈ ಹಿಂದೆ ನಿಧನರಾಗಿದ್ದಾರೆ.







