ಕಾಸರಗೋಡು: ಅಡೂರು ಹೊಸಗದ್ದೆ ನಿವಾಸಿಯೂ ವಿಜಯ ಬ್ಯಾಂಕ್‌ನ ನಿವೃತ್ತ ಮೆನೇಜರ್ ರಾಧಾಕೃಷ್ಣ ಎಚ್ (71) ನಿಧನ ಹೊಂದಿದರು. ಪ್ರಸ್ತುತ ಇವರು ಕಾಸರಗೋಡು ಅಣಂಗೂರಿನಲ್ಲಿ ವಾಸಿಸುತ್ತಿದ್ದರು.
ಮೃತರು ಪತ್ನಿ ಇಂದ್ರಾವತಿ ಉಳಯ, ಪುತ್ರಿಯರಾದ ರೇಶ್ಮಾ ಆರ್.ಕೆ, ಡಾ. ಶ್ವೇತಾ ಆರ್.ಕೆ, ಅಳಿಯಂದಿರಾದ ಅಶೋಕ ಎ.ಸಿ (ಎಲ್‌ಐಸಿ), ಡಾ. ಜಯೇಶ ನಾಯರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







