ನಿವೃತ್ತ ತಹಶೀಲ್ದಾರ್ ನಿಧನ

ಕಾಸರಗೋಡು: ನಿವೃತ್ತ ತಹಶೀಲ್ದಾರ್, ಪೊಯಿನಾಚಿ ಎಸ್.ಎನ್. ನಿವಾಸ್‌ನ ಎನ್. ನಾರಾಯಣನ್ (81) ನಿಧನ ಹೊಂದಿದರು. ಪಾಲಕುನ್ನು ಕಳಗಂ ಶ್ರೀ ಭಗವತೀ ಕ್ಷೇತ್ರ ಕೇಂದ್ರ ಸಮಿತಿ ಸದಸ್ಯ ಸಹಿತ ವಿವಿಧ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು. ಬೆಳ್ಳೂರು, ನೆಟ್ಟಣಿಗೆ ಸಹಿತ ವಿವಿಧ ಕಡೆಗಳಲ್ಲಿ ಗ್ರಾಮಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಕೆ. ಶಾಂತ ಕುಮಾರಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಎನ್. ಗೋಪಕುಮಾರ್ (ಜಿಲ್ಲಾ ಟ್ರಷರಿ ಕಾಸರಗೋಡು), ಎನ್. ಪ್ರವೀಣ್ ಕುಮಾರ್, ಎನ್. ಜ್ಯೋತಿಪ್ರಭ, ಸೊಸೆಯಂದಿರಾದ ಪ್ರಸೀತಾ, ಕೆ.ಆರ್. ಪ್ರಿಯಾಂಕ, ಅಳಿಯ ಡಾ. ಕೆ.ಟಿ. ಅನೂಪ್ ಕುಮಾರ್, ಸಹೋದರರಾದ ಎನ್. ಕೃಷ್ಣನ್, ಎನ್. ಗೋಪಾಲನ್, ಎನ್. ಭಾಸ್ಕರನ್, ಎನ್. ಅಚ್ಯುತನ್, ಎನ್. ಕುಮಾರನ್ ಸ್ವರ್ಗ (ನಿವೃತ್ತ ಮುಖ್ಯೋಪಾಧ್ಯಾಯ), ಸಹೋದರಿಯರಾದ ಎನ್. ಮಾಧವಿ, ಎನ್. ಶ್ರೀಮತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page