ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ರ ಚುನಾವಣಾ ಪ್ರಚಾರಾರ್ಥವಾಗಿ ರೋಡ್ ಶೋ ನಿನ್ನೆ ಸಂಜೆ ನಡೆಯಿತು. ಬಾಯಿಕಟ್ಟೆಯಿಂದ ಆರಂಭಗೊAಡು ಪೈವಳಿಕೆ ನಗರದಲ್ಲಿ ಸಮಾಪ್ತಿಗೊಂಡಿತು. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್, ಅಭ್ಯರ್ಥಿ ಕೆ.ಸುರೇಂದ್ರನ್, ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ.ರವೀಂದ್ರನ್, ಸುರೇಶ್ ಕುಮಾರ್ ಶೆಟ್ಟಿ, ಸತೀಶ್ಚಂದ್ರ ಭಂಡಾರಿ, ವಲಯ ಉಪಾಧ್ಯಕ್ಷ ವಿಜಯಕುಮಾರ್ ರೈ, ಮಂಡಲ ಅಧ್ಯಕ್ಷರಾದ ಸುನಿಲ್ ಅನಂತಪುರ, ಆದರ್ಶ್ ಮಂಜೇಶ್ವರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಕುಮಾರ್ ಮಯ್ಯ, ಅನಿಲ್ ಕುಮಾರ್ ಕೆ.ಪಿ, ಯತೀಶ್, ಕೆ.ವಿ ಭಟ್, ಹರಿಶ್ಚಂದ್ರ ಮಂಜೇಶ್ವರ ನೇತೃತ್ವ ನೀಡಿದರು.






