ಸರಿಯಾದ ದಾಖಲು ಪತ್ರಗಳಿಲ್ಲದೆ ಸಾಗಿಸುತ್ತಿದ್ದ 30 ಲಕ್ಷ ರೂ. ವಶ

ಮಂಜೇಶ್ವರ: ಮಂಜೇಶ್ವರ ಅಬಕಾರಿ ಕೇಂದ್ರದಲ್ಲಿ ಅಬಕಾರಿ ತಂಡ ನಡೆಸಿದ ವಾಹನ ತಪಾಸಣೆಯಲ್ಲಿ ಸರಿಯಾದ ದಾಖಲು ಪತ್ರಗಳಿಲ್ಲದೆ ಕೆಎಸ್ ಆರ್‌ಟಿಸಿ ಬಸ್‌ನಲ್ಲಿ ಕರ್ನಾಟಕದಿಂದ ಕೇರಳಕ್ಕೆ ಸಾಗಿಸುತ್ತಿದ್ದ 30 ಲಕ್ಷ ರೂ. ನಗದನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಮಲಪ್ಪುರಂ ಪೆರಿಂದಲ್‌ಮಣ್ ವಡಕಾಂಕರ ಎರಂಬತ್ ವೀಟಿಲ್ ಹಂಸ (64) ಎಂಬಾತನ ಕೈಯಿಂದ  ಈ ಹಣ ಪತ್ತೆಹಚ್ಚಿ ವಶಪಡಿಸಲಾಗಿದೆ. ಅದಕ್ಕೆ ಸಂಬಂಧಿಸಿ ಆತನನ್ನು ಕಸ್ಟಡಿಗೆ ತೆಗೆದುಕೊಂಡು ಬಳಿಕ ಅಬಕಾರಿ ಅಧಿಕಾರಿಗಳು ಆತನನ್ನು ವಶಪಡಿಸಲಾದ ಹಣದೊಂದಿಗೆ ಮಂಜೇಶ್ವರ ಪೊಲೀಸರಿಗೆ  ಹಸ್ತಾಂತರಿಸಿದರು.

ಅಬಕಾರಿ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಶಿಜಿಲ್ ಕುಮಾರ್‌ರ ನೇತೃತ್ವದಲ್ಲಿ ಎಕ್ಸೈಸ್ ಇನ್ಸ್‌ಪೆಕ್ಟರ್ ಜಿ.ಆದರ್ಶ್, ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಕೆ.ಎ. ಜನಾರ್ದನನ್, ಪ್ರಿವಂಟಿವ್ ಆಫೀಸರ್ (ಗ್ರೇಡ್) ಕೆ. ನೌಶಾದ್, ಸಿವಿಲ್ ಎಕ್ಸೈಸ್ ಆಫೀಸರ್ ಗಳಾದ ಪ್ರಶಾಂತ್ ಕುಮಾರ್, ಒ.ಪಿ. ರತೀಶ್ ಎಂಬವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

You cannot copy contents of this page