ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಬ್ಯಾಗ್‌ನಿಂದ 50 ಸಾವಿರ ರೂ.ಗಿಂತಲೂ ಹೆಚ್ಚು ಮೊತ್ತ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಬಂದ್ಯೋಡು ಅಡ್ಕ ಒಳಾಕ್ ರೋಡ್‌ನ ಬಶೀರ್ ಎಂಬವರ ಪತ್ನಿ ನೌಶೀದರ ಬ್ಯಾಗ್‌ನಿಂದ ಹಣ ಕಳವಿಗೀಡಾಗಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನೌಶೀದ ನಿನ್ನೆ ಸಂಜೆ 4.15ಕ್ಕೆ ಬಂದ್ಯೋಡಿನಿಂದ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ ಕುಂಬಳೆಗೆ ತೆರಳಿದ್ದರು. ಕುಂಬಳೆಯಿಂದ ಮನೆಗೆ ಮರಳಿದ ಬಳಿಕ ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ ೫೦ ಸಾವಿರಕ್ಕೂ ಹೆಚ್ಚು ಮೊತ್ತ ಕಾಣೆಯಾಗಿ ರುವುದು ಅರಿವಿಗೆ ಬಂದಿದೆ. ಕೂಡಲೇ ಇವರು ಕುಂಬಳೆ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದಾರೆ. ಇದೇ ವೇಳೆ ಬಸ್‌ನಿಂದ ಕುಂಬಳೆಯಲ್ಲಿ ಇಳಿಯುತ್ತಿದ್ದಾಗ ಪ್ರಯಾಣಿಕರ ಸಂದಣಿ ಮಧ್ಯೆ ಬ್ಯಾಗನ್ನು ಹಿಂದಕ್ಕೆ ಯಾರೋ ಎಳೆದಿರುವುದು ಗಮನಕ್ಕೆ ಬಂದಿತ್ತೆಂದೂ ನೌಶೀದಾ ತಿಳಿಸಿದ್ದಾರೆ.







