ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ತಿರುವಿದಾಂಕೂರು ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಎನ್. ವಾಸುರನ್ನು ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಎಸ್.ಪಿ ಶಶಿಧರನ್ ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೊನ್ನೆ ಬಂಧಿತನಾದ ಶಬರಿಮಲೆ ಕ್ಷೇತ್ರದ ನಿವೃತ್ತ ಎಕ್ಸಿಕ್ಯೂಟಿವ್ ಆಫೀಸರ್ ಸಿ. ಸುಧೀಶ್ ಕುಮಾರ್ ನೀಡಿದ ಹೇಳಿಕೆಯ ಆಧಾರದಲ್ಲಿ ವಾಸು ರನ್ನು ತನಿಖಾ ತಂಡ ವಿಚಾರಣೆ ಗೊಳಪಡಿಸಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಆ ಮೂಲಕ ಈ ಪ್ರಕರಣದ ತನಿಖೆ ಮುಜ ರಾಯಿ ಮಂಡಳಿಯ ಉನ್ನತ ಅಧಿಕಾರಿಗಳತ್ತವೂ ಈಗ ಸಾಗತೊಡಗಿದೆ. ಶಬರಿಮಲೆ ದೇಗುಲದ ಚಿನ್ನ ಕಳವು ನಡೆದ 2019ರಲ್ಲಿ ಎನ್ ವಾಸು ಮುಜ ರಾಯಿ ಮಂಡಳಿಯ ಆಯುಕ್ತರಾ ಗಿದ್ದರು. ನಂತರ ಅವರನ್ನು ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಅವರನ್ನು ವಿಚಾರ ಣೆಗೊಳಪಡಿಸಲಾಗಿದೆ.






