ಶಬರಿಮಲೆ ಚಿನ್ನ ಕಳವು: ಬಂಧಿತ ತಂತ್ರಿಗೆ ನ್ಯಾಯಾಂಗ ಬಂಧನ, ಪೂಜಾಪುರ ಜೈಲಿಗೆ

ಶಬರಿಮಲೆ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ  ಕ್ರೈಂ ಬ್ರಾಂಚ್ ವಿಭಾಗದ ಮುಖ್ಯಸ್ಥ ಎಚ್. ವೆಂಕಟೇಶ್  ನೇತೃತ್ವದ ವಿಶೇಷ ತನಿಖಾ (ಎಸ್ ಐಟಿ)ತಂಡ ನಿನ್ನೆ ಬಂಧಿಸಿದ ಶಬರಿಮಲೆ ಕ್ಷೇತ್ರದ ಪ್ರಧಾನ ತಂತ್ರಿವರ್ಯ ಕಂಠರರ್ ರಾಜೀವರ್ (66)ರನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ  14 ದಿನಗಳ ತನಕ ಪೂಜಾಪುರ   ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇವರನ್ನು  ಈ ಪ್ರಕರಣದ 13ನೇ ಆರೋ ಪಿಯನ್ನಾಗಿ ಸೇರ್ಪಡೆಗೊಳಿಸಲಾಗಿದೆ. ಶಬರಿಮಲೆ ದೇಗುಲದ ತಂತ್ರಿ ಸ್ಥಾನ ಪರಂಪರಾಗತವಾಗಿ ಲಭಿಸುವ ಚೆಂಗನ್ನೂರು ತಾಳೆಮಣ್ಣ್ ಕುಟುಂಬಕೆ ಸೇರಿದವರಾಗಿದ್ದಾರೆ. ಕಂಠರರ್ ರಾಜೀವರ್. 1998-99 ರಲ್ಲಿ ಉದ್ಯಮಿ ವಿಜಯ ಮಲ್ಯ ಶಬರಿಮಲೆ ದೇಗುಲಕ್ಕೆ ಚಿನ್ನ ನೀಡಿದ ವೇಳೆ ಹಾಗೂ 2019ರಲ್ಲಿ ಶ್ರೀ ಕ್ಷೇತ್ರದ  ಚಿನ್ನ ಕಳವು ನಡೆದ ಅವಧಿಯಲ್ಲೂ ಕಂಠರರ್ ರಾಜೀವರ್ ಶಬರಿಮಲೆ ಕ್ಷೇತ್ರದ ತಂತ್ರಿಯಾಗಿದ್ದರು. ಚಿನ್ನ ಕಳವು ಪ್ರಕರಣದ ಪ್ರಧಾನ ಆರೋಪಿ ಉಣ್ಣಿಕೃಷ್ಣನ್ ಪೋತ್ತಿಗೆ  ಚಿನ್ನ ಕಳವುಗೈಯ್ಯಲು ಮೌನ ಅನುಮತಿ ನೀಡಿ, ಆ ಮೂಲಕ ಅದರಲ್ಲಿ ಹೂಡಲಾಗಿದ್ದ  ಒಳ ಸಂಚಿನಲ್ಲೂ ಭಾಗಿಯಾದ ಆರೋಪದಂತೆ ರಾಜೀವರ್‌ರನ್ನು ಈ ಪ್ರಕರಣದ ಆರೋಪಿಯನ್ನಾಗಿ ಎಸ್‌ಐಟಿ ಸೇರ್ಪಡೆಗೊಳಿಸಿದೆ. ಭಾರತೀಯ ಶಿಕ್ಷಾ ಸಂಹಿತೆಯ 403, 406, 409, 466, 467 120 (ಬಿ), 34  ಎಂಬೀ ಸೆಕ್ಷನ್‌ಗಳ ಪ್ರಕಾರ  ಹಾಗೂ ಭ್ರಷ್ಟಾಚಾರ ತಡೆ ಕಾನೂನು 13 (1) ಮತ್ತು 13(2) ಸೆಕ್ಷನ್‌ಗಳ  ಪ್ರಕಾರ ರಾಜೀವರ್‌ರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

2019 ಮೇ 14ರಿಂದ ಮೇ 19ರ  ಮಧ್ಯೆ ರಾಜೀವರ್ ಸನ್ನಿಧಾನದ ತಂತ್ರಿವರ್ಯರಾಗಿ  ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಶಬರಿಮಲೆ ಕ್ಷೇತ್ರದ ಗರ್ಭಗುಡಿ ದ್ವಾರಪಾಲಕ ಮೂರ್ತಿಗಳು ಮತ್ತು ಪ್ರಭಾವಳಿಗಳನ್ನು  ಉಣ್ಣಿಕೃಷ್ಣನ್ ಪೋತ್ತಿಗೆ ಹಸ್ತಾಂತರಿಸಲಾಗಿತ್ತು. 2019 ಮೇ 14ರಲ್ಲಿ ಈ ಹಸ್ತಾಂತರ ನಡೆದಿತ್ತು. ಆದ್ದರಿಂದ ರಾಜೀವರ್‌ರ ಅರಿವಿನೊಂದಿಗೆ  ಈ  ವ್ಯವಹಾರಗಳು ನಡೆದಿದೆಯೆಂದು ಎಸ್‌ಐಟಿ ತಿಳಿಸಿದೆ. ಆದರೆ ಈ ವ್ಯವಹಾರದಲ್ಲೂ ನಾನು ಯಾವುದೇ ರೀತಿಯಲ್ಲ್ಲೂ ಭಾಗಿಯಾಗಿಲ್ಲ. ಈ ವಿಷಯದಲ್ಲಿ ನಾನು ನಿರಪರಾಧಿ ಯಾಗಿದ್ದೇನೆಂದು ರಾಜೀವರ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಆದರೆ ಶ್ರೀ ಕ್ಷೇತ್ರದ ಚಿನ್ನ ನಾಪತ್ತೆ ವಿಷಯ ತಿಳಿದಿದ್ದರೂ  ಆಬಗ್ಗೆ ಕಂಠರರ್ ಮುಜರಾಯಿ ಮಂಡಳಿಗೆ ತಿಳಿಸಬೇಕಾಗಿತ್ತೆಂದೂ ಅದನ್ನು ಅವರು ತಿಳಿಸಿರಲಿಲ್ಲವೆಂದು ಎಸ್‌ಐಟಿ ಹೇಳಿದೆ. ಇದೇ ಸಂದರ್ಭದಲ್ಲಿ ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ  ಕಾಳಧನ ವ್ಯವಹಾರ ನಡೆದ ಬಗ್ಗೆ ಇನ್ನೊಂದೆಡೆ ಎನ್‌ಫೋರ್ಸ್ ಮೆಂಟ್ ಡೈರೆಕ್ಟರೇಟ್ (ಇ.ಡಿ)ಕೂಡಾ ಪ್ರಕರಣ ದಾಖಲಿಸಿಕೊಂಡಿರುವ ಎರಡು ಪ್ರಕರಣಗಳಲ್ಲೂ ತನಿಖೆ ಆರಂಭಿಸಿದೆ. ಇದರಲ್ಲಿ ಎಸ್‌ಐಟಿ ದಾಖಲಿಸಿರುವ  ಆರೋಪಿಗಳನ್ನಾಗಿ ಹೆಸರಿಸಲಾಗಿರುವ ಕಂಠರರ್ ರಾಜೀವರ್ ಸೇರಿದಂತೆ ಇತರ  ಎಲ್ಲಾ ಆರೋಪಿಗಳನ್ನು ಇ.ಡಿ ದಾಖ ಲಿಸಿಕೊಂಡಿರುವ ಪ್ರಕರಣದಲ್ಲೂ ಆರೋ ಪಿಗಳನ್ನಾಗಿ ಸೇರ್ಪೆಡೆಗೊಳಿ ಸಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಆರೋಪಿಗಳಾಗಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ಇ.ಡಿ ತಿಳಿಸಿದೆ.

You cannot copy contents of this page