ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ನಿನ್ನೆ ಬಂಧಿಸಿದ ತಿರುವಿದಾಂಕೂರ್ ಮುಜ ರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಆಯುಕ್ತರೂ ಆಗಿದ್ದ ಎನ್. ವಾಸುರನ್ನು ಬಳಿಕ ಪತ್ತನಂತಿಟ್ಟ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ಪ್ರಥಮ) ನೀಡಿದ ನಿರ್ದೇಶ ಪ್ರಕಾರ ನವಂಬರ್ ೨೪ರ ತನಕ ನ್ಯಾಯಾಂಗ ಬಂಧನದಲ್ಲಿರಿ ಸಲಾಗಿದೆ. ಇದರಂತೆ ಅವರನ್ನು ಕೊಟ್ಟಾರಕರ ಸಬ್ ಜೈಲ್‌ಗೆ ಸಾಗಿಸಲಾಯಿತು.
ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ವಾಸುರನ್ನು ಮೂರನೇ ಆರೋಪಿಯನ್ನಾಗಿ ಸೇರಿಸಲಾಗಿದೆ. 2019ರಲ್ಲಿ ಶಬರಿಮಲೆ ದೇಗುಲದ ಚಿನ್ನ ಲೇಪಿತ ದ್ವಾರಪಾಲಕ ಮೂರ್ತಿಗಳ ಹಾಗೂ ಗರ್ಭಗುಡಿಯ ಬಾಗಿಲನ್ನು ಈ ಪ್ರಕರಣದ ಒಂದನೇ ಆರೋಪಿ ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿಗೆ ಹಸ್ತಾಂತರಿಸಿದಾಗ ದೇಗುಲದ ಸಂಬಂಧಪಟ್ಟ ದಾಖಲುಪತ್ರಗಳಲ್ಲಿ ಅದು ತಾಮ್ರದ ಕವಚಗಳಾಗಿತ್ತೆಂದು ಅಂದು ಮುಜರಾಯಿ ಮಂಡಳಿಯ ಅಧ್ಯಕ್ಷರಾಗಿದ್ದ ಎನ್. ವಾಸು ನೀಡಿದ ನಿರ್ದೇಶ ಪ್ರಕಾರ ನಮೂದಿಸಲಾಗಿ ತ್ತೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿರುವ ಹಿನ್ನೆಲೆಯಲ್ಲಿ ತನಿಖಾ ತಂಡ ವಾಸುರನ್ನು ಈ ಪ್ರಕರಣದ ಮೂರನೇ ಆರೋ ಪಿಯನ್ನಾಗಿ ಒಳಪಡಿಸಿ ಅದರಂತೆ ಅವರನ್ನು ಬಂಧಿಸಿದೆ. ಆದರೆ ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಕವಚವನ್ನು ಚಿನ್ನ ಲೇಪನಗೊಳಿಸಲು ಸಾಗಿಸಿದ್ದು ತನ್ನ ಅರಿವಿನೊಂದಿಗೆ ಆಗಿರಲಿಲ್ಲವೆಂಬ ವಾದವನ್ನು ಪಿ. ವಾಸು ಇದೇ ಸಂದರ್ಭದಲ್ಲಿ ಮಂಡಿಸಿದ್ದಾರೆ.
೨೦೧೯ ಫೆಬ್ರವರಿ ೨೬ರಂದು ವಾಸು ನೀಡಿದ ಪತ್ರದ ಆಧಾರದಲ್ಲಿ ಅದೇ ವರ್ಷ ಮಾರ್ಚ್ 19ರಂದು ದೇಗುಲದ ಚಿನ್ನ ಲೇಪಿತ ಕವಚಗಳಿಗೆ ಮತ್ತೆ ಚಿನ್ನ ಲೇಪಿಸುವ ಹೆಸರಲ್ಲಿ ಅದನ್ನು ಉಣ್ಣಿಕೃಷ್ಣನ್ ಪೋತ್ತಿಗೆ ನೀಡಲಾಗಿತ್ತು. ಅದು ತಾಮ್ರದ ಕವಚಗಳಾಗಿತ್ತೆಂದು ದಾಖಲುಪತ್ರಗಳಲ್ಲಿ ವಾಸುರ ನಿರ್ದೇಶ ಪ್ರಕಾರ ದಾಖಲಿಸಲಾಗಿತ್ತು ಎಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ತನಿಖಾ ತಂಡ ತಿಳಿಸಿದೆ.
ಸಿಪಿಎಂನ ಹಿತೈಷಿಯೂ ಹಾಗೂ ನ್ಯಾಯವಾದಿಯೂ ಆಗಿರುವ ಎನ್. ವಾಸು 1988ರಲ್ಲಿ ಕೊಲ್ಲಂ ಜಿಲ್ಲೆಯ ಕುಳಿಕಡ ಪಂಚಾಯತ್‌ನ ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದ್ದರು. ಮಾತ್ರವಲ್ಲ ಭ್ರಷ್ಟಾಚಾರ ಪತ್ತೆಹಚ್ಚುವ ಟ್ರಿಬ್ಯೂನಲ್‌ನ ನ್ಯಾಯಾಧೀಶರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
2006ರಲ್ಲಿ ವಿ.ಎಸ್. ಅಚ್ಯುತಾನಂದನ್‌ರ ನೇತೃತ್ವದ ಸರಕಾರದ ಕಾಲದಲ್ಲಿ ಅವರು ಸಚಿವ ಪಿ.ಕೆ. ಗುರುದಾಸ್‌ರ ಹೆಚ್ಚುವರಿ ಪ್ರೈವೇಟ್ ಕಾರ್ಯ ದರ್ಶಿಯಾಗಿ ಹಾಗೂ 2010 ಮತ್ತು 2018ರಲ್ಲಿ ಅವರು ಮುಜರಾಯಿ ಮಂಡ ಳಿಯ ಆಯುಕ್ತರಾಗಿಯೂ ಸೇವೆ ಸಲ್ಲಿಸಿ ದ್ದರು. ನಂತರ ಮಂಡಳಿಯ ಅಧ್ಯಕ್ಷರಾದರು.





