ತಿರುವನಂತಪುರ: ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಕೇಂದ್ರ ಗುಪ್ತಚರ ವಿಭಾಗವಾದ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಹೇಳಿದೆ.
ಶಬರಿಮಲೆ ಚಿನ್ನ ಕಳವು ಅಂತಾ ರಾಜ್ಯ ನಂಟು ಹೊಂದಿರುವ ಪ್ರಕರಣ ವಾಗಿದೆ. ಆದ್ದರಿಂದ ಇದರ ವಾಸ್ತವತೆ ಯನ್ನು ಸಂಪೂರ್ಣವಾಗಿ ಬಯಲಿಗೆ ಯಲು ಪ್ರಸ್ತುತ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕಾಗಿರುವುದು ಅನಿವಾರ್ಯವಾಗಿದೆಂದು ಐ.ಬಿಯ ಕೇರಳ ಘಟಕವು ಕೇಂದ್ರದ ಡೈರೆಕ್ಟರ್ ಜನರಲ್ ಆಫ್ ಇಂಟೆಲಿಜೆನ್ಸ್‌ಗೆ ಸಲ್ಲಿಸಿದ ವರದಿಯಲ್ಲಿ ಶಿಫಾರಸ್ಸು ಮಾಡಿದೆ. ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣದಲ್ಲಿ ಕಾಳಧನ ಹಾಗೂ ಹವಾಲಾ ಹಣ ವ್ಯವಹಾರಗಳೂ ನಡೆದಿದೆಯೆಂಬ ಶಂಕೆಯ ಹಿನ್ನೆಲೆಯಲ್ಲಿ ಆ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಕೂಡಾ ಇನ್ನೊಂದೆಡೆ ತನಿಖೆ ನಡೆಸುತ್ತಿದೆ. ಸದ್ಯ ಈ ಕಳವು ಪ್ರಕರಣದ ತನಿಖೆ ಕೇರಳ ಹೈಕೋರ್ಟ್‌ನ ಮೇಲ್ನೋಟದಲ್ಲಿ ನಡೆಯುತ್ತಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನಂಟು ಹೊಂದಿರುವ ಬಗ್ಗೆಯೂ ಶಂಕೆ ಉಂಟಾಗಿದೆ. ಆ ಬಗ್ಗೆ ಹೈಕೋರ್ಟ್ ಕೂಡಾ ಕಳವಳ ವ್ಯಕ್ತಪಡಿಸಿತ್ತು. ಅದಾದ ಬೆನ್ನಲ್ಲೇ ಆ ಬಗ್ಗೆ ಕೇಂದ್ರ ಇಂಟೆಲಿಜೆನ್ಸ್ ಬ್ಯೂರೋ ತನಿಖೆ ನಡೆಸಿ ಪ್ರಾಥಮಿಕ ವರದಿ ತಯಾರಿಸಿ ಅದನ್ನು ಡೈರೆಕ್ಟರ್ ಜನರಲ್ ಆಫ್ ಇಂಟೆಲಿಜೆನ್ಸ್ ಈಗಾಗಲೇ ಕಳುಹಿಸಿಕೊಟ್ಟಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಡ ಬೇಕೆಂದು ಆ ವರದಿಯಲ್ಲಿ ಶಿಫಾರಸ್ಸು ಮಾಡಿದೆ. ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವ ಅಗತ್ಯವಿಲ್ಲವೆಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆ ತೃಪ್ತಿಕರವಾದುದಾಗಿದೆ. ತನಿಖೆ ಸರಿಯಾದ ದಾರಿಯಲ್ಲೇ ಸಾಗುತ್ತಿದೆ. ಇದಕ್ಕೆ ಸಂಬಂಧಿಸಿ ವಿಚಾರಣೆಗೊಳ ಪಡಿಸಬೇಕಾಗಿರುವ ವ್ಯಕ್ತಿಗಳನ್ನೆಲ್ಲಾ ತನಿಖಾ ತಂಡ ವಿಚಾರಣೆ ಗೊಳಪಡಿಸುತ್ತಿದೆ. ಈ ಪ್ರಕರಣದಲ್ಲಿ ಸರಕಾರ ಯಾವುದೇ ರೀತಿಯ ಹಸ್ತಕ್ಷೇಪ ನಡೆಸಿಲ್ಲ. ಹೈಕೋರ್ಟ್‌ನ ನೇರ ಮೇಲ್ನೋಟದಲ್ಲೇ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕಾದ ಅಗತ್ಯವಿಲ್ಲವೆಂದೂ ಮುಖ್ಯಮಂತ್ರಿ ಹೇಳಿದ್ದಾರೆ.







