ಶಬರಿಮಲೆ ದೇಗುಲದಿಂದ ಚಿನ್ನ ಕಳವು ಪ್ರಕರಣ: ಕೆ.ಪಿ. ಶಂಕರ್‌ದಾಸ್ ಸೆರೆ ನ್ಯಾಯಾಂಗ ಬಂಧನ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ೧೧ನೇ ಆರೋಪಿಯಾಗಿರುವ ತಿರು ವಿದಾಂಕೂರ್ ಮುಜರಾಯಿ ಮಂ ಡಳಿಯ ಮಾಜಿ ಸದಸ್ಯ ಹಾಗೂ ಸಿಪಿಐ ಪ್ರತಿನಿಧಿಯೂ ಆಗಿದ್ದ ಕೆ.ಪಿ. ಶಂಕರ್ ದಾಸ್‌ರನ್ನು  ವಿಶೇಷ ತನಿಖಾ ತಂಡ (ಎಸ್‌ಐಟಿ) ಕೊನೆಗೂ ಬಂಧಿಸಿದೆ.

ಶಬರಿಮಲೆಯಲ್ಲಿ ನಿನ್ನೆ ಮಕರ ಜ್ಯೋತಿ   ಬೆಳಗುವ ವೇಳೆಯಲ್ಲೇ ಇವರ ಬಂಧನ ನಡೆದಿದೆ. ಆಮೂಲಕ ಶಬರಿ ಮಲೆ ಚಿನ್ನ ಕಳವು ನಡೆದ ಸಮಯದಲ್ಲಿ  ಮುಜರಾಯಿ ಮಂಡಳಿಯ ಆಡಳಿತ ಸಮಿತಿಯಲ್ಲಿದ್ದ ಎಲ್ಲರೂ  ಬಂಧಿಸ ಲ್ಪಟ್ಟಂತಾಯಿತು.  ಅಂದು ಮಂಡಳಿಯ ಅಧ್ಯಕ್ಷರಾಗಿದ್ದ ಪದ್ಮಕುಮಾರ್ ಮತ್ತು ಸದಸ್ಯ ಎ. ವಿಜಯ ಕುಮಾರ್‌ರನ್ನು ಈ ಹಿಂದೆಯೇ ಬಂಧಿಸಲಾಗಿದೆ. ಆದರೆ  ಕೆ.ಪಿ.ಶಂಕರ್‌ದಾಸ್‌ರನ್ನು  ಎಸ್‌ಐಟಿ ಬಂಧಿಸುವ ತಯಾರಿಯಲ್ಲಿ ತೊಡಗಿ ದಾಗ ಶಂಕರ್‌ದಾಸ್ ಹೃದಯಾಘಾತ ಮತ್ತು ಪಾರ್ಶ್ವವಾಯು ಹೆಸರಲ್ಲಿ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲುಗೊಂಡಿದ್ದರು. ನಿನ್ನೆ ಅವರನ್ನು ಅಲ್ಲಿಂದ ಆಸ್ಪತ್ರೆಯ ಬೇರೆ ಕೊಠಡಿಗೆ ಸ್ಥಳಾಂತರಿಸಲಾಯಿತು.  ಎಸ್ಪಿ ಶಶಿಧರನ್ ನೇತೃತ್ವದ ಎಸ್‌ಐಟಿ ತಂಡ ನಿನ್ನೆ ಸಂಜೆ ಆಸ್ಪತ್ರೆಗೆ ತೆರಳಿ ವೈದ್ಯರೊಂದಿಗೆ ಚರ್ಚೆ ನಡೆಸಿದ ಬಳಿಕ ಸ್ಪೆಷಲ್ ತಹಶೀಲ್ದಾರ್‌ರ ಸಾನಿಧ್ಯದಲ್ಲಿ ಶಂಕರ್‌ದಾಸ್‌ರ ಬಂಧನ ದಾಖಲಿಸಲಾಯಿತು. ನಂತರ ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯದ ನ್ಯಾಯಾ ಧೀಶರು ಆಸ್ಪತ್ರೆಗೆ  ತೆರಳಿ ಅವರು ನೀಡಿದ ಆದೇಶ ಪ್ರಕಾರ ಶಂಕರ್‌ದಾಸ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಯಿತು.

ಬಂಧನವನ್ನು ತಪ್ಪಿಸಲು ಶಂಕರ್ ದಾಸ್ ನಿರೀಕ್ಷಣಾ ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಿ ದ್ದರು. ಆ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಶಬರಿಮಲೆ ದೇವಸ್ಥಾನದ ದೇವರನ್ನಾದರೂ ನಿಮಗೆ ಸುಮ್ಮನೆ ಬಿಡಬಾರದೇ ಎಂದು ಪ್ರಶ್ನಿಸಿತ್ತು. ಮಾತ್ರವಲ್ಲದೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಮಾತ್ರವಲ್ಲ ಶಬರಿಮಲೆ ಪ್ರಕರಣದಲ್ಲಿ ಶಂಕರ್‌ದಾಸ್ ಆರೋಪಿಯಾಗಿ ಸೇರಿಸಲ್ಪಟ್ಟ ದಿನದಿಂದ ಅವರು ಅಸೌಖ್ಯದ ಹೆಸರಲ್ಲಿ ಆಸ್ಪತ್ರೆಯಲ್ಲಿ  ದಾಖಲುಗೊಂಡಿರುವುದನ್ನು ಇನ್ನೊಂದೆಡೆ ಕೇರಳ ಹೈಕೋರ್ಟ್  ಕೂಡಾ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. 2019 ಮಾರ್ಚ್ 19ರಂದು ಸೇರಿದ ಮುಜರಾಯಿ ಮಂಡಳಿ ಸಭೆಯ ದಾಖಲುಪತ್ರದಲ್ಲಿ ತಿದ್ದುಪಡಿ ತಂದು ಈ ಪ್ರಕರಣದ ಒಂದನೇ ಆರೋಪಿ ಉಣ್ಣಿಕೃಷ್ಣನ್ ಪೋತ್ತಿಗೆ ಚಿನ್ನ ಕಳವುಗೈಯ್ಯಲು ದಾರಿ ಮಾಡಿಕೊಟ್ಟ ಆರೋಪದಂತೆ ಶಂಕರ್‌ದಾಸ್ ವಿರುದ್ಧ ಕೇಸು ದಾಖಲಿಸಲಾಗಿದೆ. ಚಿನ್ನ ಲೇಪಿತ ಮೂರ್ತಿಗಳು ತಾಮ್ರದ್ದಾಗಿದೆಯೆಂದು ದಾಖಲುಪತ್ರದಲ್ಲಿ ನಮೂದಿಸಲಾ ಗಿತ್ತು. ಆ ದಾಖಲುಪತ್ರಕ್ಕೆ ಶಂಕರ್ ದಾಸ್ ಕೂಡಾ ಸಹಿ ಹಾಕಿದ್ದರೆಂದು ಎಸ್‌ಐಟಿ ತಿಳಿಸಿದೆ.

RELATED NEWS

You cannot copy contents of this page