ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ಮುಖ್ಯ ಅರ್ಚಕ ಸತ್ಯನಾರಾಯಣ ಅಡಿಗ ನಿಧನ

ಕಾಸರಗೋಡು:  ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ಮುಖ್ಯ ಅರ್ಚಕರಾಗಿದ್ದ ಕೂಡ್ಲು ಗಂಗೆ ಕ್ರಾಸ್‌ರೋಡ್ ಶ್ರೀ ದುರ್ಗಾ ನಿವಾಸ್‌ನ ಸತ್ಯನಾರಾಯಣ ಅಡಿಗ (73) ನಿಧನಹೊಂದಿದರು. ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ೨೫ ವರ್ಷಗಳ ಕಾಲ  ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ 10 ವರ್ಷಗಳ ಕಾಲ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನೌಕರನೂ ಆಗಿದ್ದರು. ಶಿವಳ್ಳಿ ಬ್ರಾಹ್ಮಣ ಸಭಾದ ಸಕ್ರಿಯ ಕಾರ್ಯಕರ್ತನೂ ಆಗಿದ್ದರು. ನಿನ್ನೆ ಸಂಜೆ ಮನೆಯಲ್ಲಿ ನಿಧನ ಸಂಭವಿಸಿದೆ.

ಮೃತರು ಪತ್ನಿ ಶಾಂತ, ಮಕ್ಕಳಾದ ಪ್ರಶಾಂತ್ ಅಡಿಗ, ಪ್ರದೀಪ್ ಅಡಿಗ, ಸೊಸೆಯಂದಿರಾದ ದೀಪ್ತಿ, ರಂಜಿತ, ಸಹೋದರಿ ರುಕ್ಮಿಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನಕ್ಕೆ ಶಿವಳ್ಳಿ ಬ್ರಾಹ್ಮಣ ಸಭಾ ತೀವ್ರ ಸಂತಾಪ ವ್ಯಕ್ತಪಡಿಸಿದೆ.

You cannot copy contents of this page