ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾಸರಗೋಡು, ಬದಿಯಡ್ಕ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ನೀರ್ಚಾಲು, ಕನ್ನೆಪ್ಪಾಡಿ, ಕಡಂಬಳ, ಮಾನ್ಯ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನೀರ್ಚಾಲು ಇದರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ನಡೆಯಿತು. ಶಾಲಾ ಪ್ರಬಂಧಕ ಜಯದೇವ ಖಂಡಿಗೆ ದೀಪ ಬೆಳಗಿಸಿ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿ ಜನಜಾಗೃತಿ ವಿಭಾಗದ ಯೋ ಜನಾದಿsಕಾರಿ ಗಣೇಶ್ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಿದರು. ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂ ಮಾತನಾಡುತ್ತಾ ಮದ್ಯಪಾನಕ್ಕೆ ಬಲಿಯಾದ ವ್ಯಸನಿಗಳನ್ನು ಶಿಬಿರಕ್ಕೆ ಸೇರ್ಪಡೆ ಮಾಡಿ ಸಮಾಜದಲ್ಲಿ ಮಾದರಿ ಜೀವನ ನಡೆಸಲು ದಾರಿ ತೋರಿಸಿದ ಏಕೈಕ ಸಂಸ್ಥೆ ಧರ್ಮಸ್ಥಳ ಯೋಜನೆಯಾಗಿದೆ ಎಂದು ತಿಳಿಸಿ ದರು. ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಒ. ಅಧ್ಯಕ್ಷತೆ ವಹಿಸಿದರು. ಯೋಜನಾದಿsಕಾರಿ ದಿನೇಶ್ ಬಿ, ಕಾರ್ಮಾರು ಶ್ರೀ ಮಹಾವಿಷ್ಣು ದೇವ ಸ್ಥಾನದ ಟ್ರಸ್ಟಿ ಸುಂದರ ಶೆಟ್ಟಿ ಕೊಲ್ಲಂ ಗಾನ ಉಪಸ್ಥಿತರಿದ್ದರು. ಯೋಜನೆ ಯಿಂದ ಮಂಜೂರಾದ ಸುಜ್ಞಾನ ನಿದಿs ಶಿಷ್ಯ ವೇತನದ ಮಂಜೂರಾತಿ ಹಾಗೂ ಕ್ರಿಟಿಕಲ್ ಇಲ್‌ನೆಸ್ ಫಂಡ್ ಮಂಜೂರಾತಿ ಪತ್ರವನ್ನು ಫಲಾನುಭವಿಗೆ ವಿತರಿಸಲಾಯಿತು. ಒಕ್ಕೂಟಗಳ ಪದಾಕಾರಿಗಳನ್ನು ಅಭಿನಂದಿಸಲಾಯಿತು. ವೇದಮೂರ್ತಿ ಲಕ್ಷಿö್ಮÃನಾರಾಯಣ ಭಟ್ ಸತ್ಯನಾರಾಯಣ ಪೂಜೆಯ ವಿದಿs ವಿಧಾನಗಳನ್ನು ನಡೆಸಿಕೊಟ್ಟರು. ಸೇವಾಪ್ರತಿನಿದಿs ಬೇಬಿ ಸ್ವಾಗತಿಸಿ, ನಳಿನಾಕ್ಷಿ ವಂದಿಸಿದರು. ಜ್ಯೋತಿ ವರದಿ ವಾಚಿಸಿದರು. ಮೇಲ್ವಿಚಾರಕಿ ಸುಗುಣ ಹವಾಲ್ದಾರ್ ನಿರ್ವಹಿಸಿದರು. ಸುನಿಲ್, ಅನ್ನಪೂರ್ಣೇಶ್ವರಿ, ಚಿತ್ರ, ಶಿವಾನಿ, ಶಶಿಕಲಾ, ಮಮತಾ, ಅನಿತಾ, ಜಲಜಾಕ್ಷಿ, ಸುನಿತಾ, ಪ್ರಪುಲ್ಲ ಉಪಸ್ಥಿತರಿದ್ದರು. ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.







