ಸೇವ್ ಬಾಕ್ಸ್ ವಂಚನೆ: ನಟ ಜಯಸೂರ್ಯರ 39.1 ಲಕ್ಷ ರೂ. ಮೌಲ್ಯದ ಆಸ್ತಿ ಇ.ಡಿ ಮುಟ್ಟುಗೋಲು

ಎರ್ನಾಕುಳಂ: ತೃಶೂರು ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ‘ಸೇವ್ ಬೋಕ್ಸ್ ಬಿಡ್ಡಿಂಗ್ ಆಪ್’  ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಲಯಾಳಂ ಸಿನಿಮಾ ನಟ ಜಯಸೂರ್ಯರ 39.1 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶ ನಾಲಯ (ಇ.ಡಿ) ಮುಟ್ಟುಗೋಲು ಹಾಕಿದೆ.

ಸೇವ್ ಬಾಕ್ಸ್ ಆಪ್‌ನ ರಾಯ ಬಾರಿಯಾಗಿರುವ ಜಯಸೂರ್ಯರನ್ನು ಇ.ಡಿ ಈ ಹಿಂದೆ ಎರಡು ಬಾರಿ ವಿಚಾ ರಣೆಗೊಳಪಡಿಸಿ ಅವರ ಹೇಳಿಕೆಗಳನ್ನು ದಾಖಲಿಸಿ ಕೊಂಡಿತ್ತು. ಅದಾದ ಬೆನ್ನಲ್ಲೇ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿರುವ ಈ ಕ್ರಮ ಕೈಗೊಂಡಿದೆ. ಠೇವಣಿ ಹೂಡುವಿಕೆ ಹಾಗೂ ಫ್ರಾಂಚೈಸಿ ನೀಡುವ ಭರವಸೆ ನೀಡಿ ಅದರ ಹೆಸರಲ್ಲಿ ಕೋಟಿಗಟ್ಟಲೆ ರೂ.ಗಳನ್ನು ಪಡೆದು ಬಳಿಕ ವಂಚನೆ ನಡೆಸಲಾಗಿದೆಯೆಂದು ಆರೋಪಿಸಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಸೇವ್ ಬೋಕ್ಸ್ ಬೆಟ್ಟಿಂಗ್ ಆಪ್‌ನ  ಆಡಳಿತ ನಿರ್ದೇಶಕ ಸ್ವಾತಿಖ್ ರಹೀಂ ವಿರುದ್ಧ 2023ರಲ್ಲಿ ತೃಶರು ಈಸ್ಟ್ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಕಾಳಧನ ವ್ಯವಹಾರ ನಡೆದಿದೆಯೆಂದು ತನಿಖೆಯಲ್ಲಿ ಸ್ಪಷ್ಟಗೊಂಡ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವೂ ಆ ಬಗ್ಗೆ ತನಿಖೆ ಆರಂಭಿಸಿ ಕಾಳಧನ ತಡೆ ಕಾನೂನು ಪ್ರಕಾರ  ಪ್ರಕರಣ ದಾಖಲಿಸಿಕೊಂಡಿತ್ತು. ಅದರಂತೆ ಈ ಆಪ್‌ನ ರಾಯಬಾರಿ ನಟ ಜಯಸೂರ್ಯರನ್ನು ಇ.ಡಿ ಕಳೆದ ಡಿಸೆಂಬರ್‌ನಲ್ಲಿ ಎರಡು ಬಾರಿ ವಿಚಾರಣೆಗೊಳಪಡಿಸಿತ್ತು. ಸೇವ್ ಬೋಕ್ಸ್ ಬೆಟ್ಟಿಂಗ್ ಆಪ್‌ನ ಹೆಸರಲ್ಲಿ ವಂಚನೆಯ ಮೂಲಕ  ಪಡೆದ ಹಣದಲ್ಲಿ ಜಯಸೂರ್ಯರಿಗೆ ರಾಯಬಾರಿ ಎಂಬ ನೆಲೆಯಲ್ಲಿ ಹಣ ನೀಡಲಾಗಿಗಿದೆ ಎಂದೂ,ಅದುವೇ   ಅವರ ಆಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿರುವುದರ ಪ್ರಧಾನ ಹಿನ್ನೆಲೆಯಾಗಿದೆ

You cannot copy contents of this page