ಕುಂಬಳೆ: ಕಳತ್ತೂರು ಸಮೀಪ ನಿನ್ನೆ ಸಂಜೆ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಅದೃಷ್ಠವಶಾತ್ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿಹೋಗಿದೆ. ಕಳತ್ತೂರು ಸಮೀಪದ ಕಾಜೂರುಬೈಲಿಗೆ ಹೋಗುವ ರಸ್ತೆ ಬದಿ ಬಸ್ ಅಪಘಾತಕ್ಕೀಡಾಗಿದೆ. ಮುಟ್ಟಂನ ಖಾಸಗಿ ಶಾಲೆಯೊಂದರ ಬಸ್ ಅಪಘಾತಕ್ಕೀಡಾಗಿದೆ. ನಿಯಂತ್ರಣ ತಪ್ಪಿ ರಸ್ತೆಯಿಂದ ಹಿಂದಕ್ಕೆ ಬಸ್ ಚಲಿಸಿದ್ದು ಈ ವೇಳೆ ಮರವೊಂದಕ್ಕೆ ತಾಗಿ ನಿಂತಿರುವುದರಿಂದ ಭಾರೀ ಅಪಾಯ ತಪ್ಪಿದೆ. ಕೆಳಗೆ ಭಾರೀ ಕಂದಕವಿದ್ದು, ಅಲ್ಪ ದೂರದಲ್ಲಿ ಶಿರಿಯ ನದಿಯೂ ಹರಿಯುತ್ತಿದೆ. ಮರ ಇಲ್ಲದಿರುತ್ತಿದ್ದಲ್ಲಿ ಭಾರೀ ಅಪಾಯವೇ ಸಂಭವಿಸುತ್ತಿತ್ತೆಂದು ನಾಗರಿಕರು ತಿಳಿಸುತ್ತಿದ್ದಾರೆ. ಅಪಘಾತ ವೇಳೆ ಬಸ್‌ನಲ್ಲಿ ೫೦ರಷ್ಟು ಮಕ್ಕಳಿದ್ದರೆಂದು ಹೇಳಲಾಗುತ್ತಿದೆ.







