ಶಾಲಾ ಬಸ್ ಅಪಘಾತ: ತಪ್ಪಿದ ದುರಂತ

ಕಾಸರಗೋಡು: ನಿಯಂತ್ರಣ ತಪ್ಪಿದ ಶಾಲಾ ಬಸ್ ರಸ್ತೆ ಬದಿಯ ಹೊಂಡಕ್ಕೆ ಮಗುಚಿದ್ದು  ಅದೃಷ್ಟವ ಶಾತ್ ಭಾರೀ ದುರಂತ ತಪ್ಪಿದೆ. ನಿನ್ನೆ ಬೆಳಿಗ್ಗೆ   ನೆಲ್ಲಿಕುಂಜೆ ಬಂಗರಗುಡ್ಡೆ ಯಲ್ಲಿ ಅಪಘಾತವುಂಟಾಗಿದೆ. ನೆಲ್ಲಿಕುಂಜೆ ಅನ್ವಾರುಲ್ ಉಲೂಂ ಎಯುಪಿ ಶಾಲೆಯ ವಿದ್ಯಾರ್ಥಿಗಳನ್ನು ಕೊಂಡೊ ಯ್ಯುತ್ತಿದ್ದ ಬಸ್ ಅಪಘಾತಕ್ಕೀ ಡಾಗಿದೆ.  ಶಾಲೆ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ತಂಙಳ್ ಉಪ್ಪಾಪ ಆಂಗ್ಲ ಮಾಧ್ಯಮ ಶಾಲೆಯ ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳೂ ಬಸ್‌ನಲ್ಲಿದ್ದರು. ವಿದ್ಯಾರ್ಥಿಗಳು  ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಬಂಗರಗುಡ್ಡೆಯ ರಸ್ತೆ ಹಾನಿಗೀಡಾಗಿ ಹಲವು ತಿಂಗಳುಗಳು ಕಳೆಯಿತು. ಭಾರೀ ಗಾತ್ರದ ಹೊಂಡಗಳು ಸೃಷ್ಟಿಯಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾ ಗಿದೆ. ಕಾಡುಪೊದೆಗಳು ರಸ್ತೆಗೆ ವಾಲಿ ನಿಂತಿದ್ದು, ಅವುಗಳನ್ನು ತಪ್ಪಿಸಿ ಸಂಚರಿ ಸುತ್ತಿದ್ದ ವೇಳೆ ಶಾಲಾ ಬಸ್ ಅಪಘಾತ ಕ್ಕೀಡಾಗಿರುವುದಾಗಿ ಹೇಳಲಾಗುತ್ತಿದೆ.

RELATED NEWS

You cannot copy contents of this page