ಮುಳ್ಳೇರಿಯ: ಶಾಲಾ ವಿದ್ಯಾರ್ಥಿಯೋರ್ವ ಮನೆಯ ಬೆಡ್ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿಯಾದ ಪ್ರಜ್ವಲ್ (14) ಎಂಬಾತ ಮೃತಪಟ್ಟಿದ್ದಾನೆ. ಈತ ಬೆಳ್ಳೂರು ನೆಟ್ಟಣಿಗೆ ಕುಂಜತ್ತೋಡಿ ನಿವಾಸಿ ಜಯಕರ-ಅನಿತಾ ದಂಪತಿಯ ಪುತ್ರನಾಗಿದ್ದಾನೆ. ನಿನ್ನೆ ಅಪರಾಹ್ನ 2.30ರಿಂದ 4.30ರ ಮಧ್ಯೆ ಘಟನೆ ನಡೆದಿದೆ. ತಾಯಿ ಅನಿತಾ ಮುಳ್ಳೇರಿಯ ಶಾಲೆಯಲ್ಲಿ ಕಲಿಯುತ್ತಿರುವ ಪುತ್ರಿಯನ್ನು ಕರೆದುಕೊಂಡು ಬರಲು ತೆರಳಿದ್ದರು. ಅವರು ಮರಳಿ ಮನೆಗೆ ತಲುಪಿದಾಗ ಪ್ರಜ್ವಲ್ ಬೆಡ್ರೂಂನಲ್ಲಿ ಶಾಲು ಬಳಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಸ್ಥಳೀಯರು ಸೇರಿ ಪ್ರಜ್ವಲ್ನನ್ನು ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿದ್ದು ಅಷ್ಟರೊಳಗೆ ಸಾವು ಸಂಭವಿಸಿರುವುದಾಗಿ ತಿಳಿದುಬಂದಿದೆ.
ಆದಿತ್ಯವಾರ ಪ್ರಜ್ವಲ್ ಅಜ್ಜಿ ಮನೆಗೆ ತೆರಳಿದ್ದನು. ಅಲ್ಲಿಂದ ನಿನ್ನೆ ಶಾಲೆಗೆ ಪರೀಕ್ಷೆ ಬರೆಯಲು ತಲುಪಿದ್ದನು. ಪರೀಕ್ಷೆ ಮಧ್ಯಾಹ್ನ ಬಳಿಕವೆಂದು ಭಾವಿಸಿ 11 ಗಂಟೆ ವೇಳೆ ಈತ ಶಾಲೆಗೆ ತಲುಪಿದ್ದಾನೆ. ಆದರೆ ಪರೀಕ್ಷೆ ನಿನ್ನೆ ಬೆಳಿಗ್ಗೆ ನಡೆದಿತ್ತು. ತರಗತಿಗೆ ತಲುಪಲು ವಿಳಂಬವಾಗಿ ದ್ದರೂ ಪ್ರಜ್ವಲ್ಗೆ ಪರೀಕ್ಷೆ ಬರೆಯಲು ಅನುಮತಿ ನೀಡಿರುವುದಾಗಿ ಶಾಲಾಧಿ ಕಾರಿಗಳು ಪೊಲೀಸರಲ್ಲಿ ತಿಳಿಸಿದ್ದಾರೆ. ಓದಿನಲ್ಲಿ ಪ್ರಜ್ವಲ್ ಮುಂದಿದ್ದನೆಂದು ಅಧ್ಯಾಪಕರು ತಿಳಿಸಿದ್ದಾರೆ. ಆದರೆ ಈತ ಯಾಕಾಗಿ ನೇಣು ಬಿಗಿದು ಸಾವಿ ಗೀಡಾಗಿದ್ದಾನೆಂದು ತಿಳಿದುಬಂದಿಲ್ಲ.
ಮೃತನು ತಂದೆ, ತಾಯಿ, ಸಹೋದರಿ ಪ್ರಯಾಗ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾನೆ. ಮೃತದೇಹವನ್ನು ಮರಣೋ ತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಘಟನೆಗೆ ಸಂಬಂಧಿ ಸಿ ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.







