ಯುಡಿಎಫ್‌ನ ಒತ್ತಡದಿಂದ ಎಸ್‌ಡಿಪಿಐ ನಾಮಪತ್ರ ಹಿಂತೆಗೆದುಕೊಂಡಿದೆ-ಎಂ.ಎ. ಬೇಬಿ

ಕಾಸರಗೋಡು: ವಿಧಾನಸಭಾ ಚುನಾವಣೆಯಲ್ಲಿ  ಎಸ್‌ಡಿಪಿಐ ಯೊಂದಿಗೆ ಎಡರಂಗ ಯಾವುದೇ ರೀತಿಯ ಡೀಲ್ ಮಾಡಿಕೊಂಡಿಲ್ಲ ವೆಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹೇಳಿದ್ದಾರೆ. ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ನಿನ್ನೆ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್‌ನ ಒತ್ತಡಕ್ಕೆ ಮಣಿದು ಅಲ್ಲಿ ಎಸ್‌ಡಿಪಿಐ ಅಭ್ಯರ್ಥಿ ತನ್ನ ನಾಮಪತ್ರ ಹಿಂಪಡೆದುಕೊಂಡಿದೆ ಎಂದು ಎಂ.ಎ. ಬೇಬಿ ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ. ಎಸ್‌ಡಿಪಿಐ ಅದರ ನಿಲುವನ್ನು ಈಗಾಗಲೇ ಘೋಷಿಸಿದೆ. ಆದರೆ ಎಸ್‌ಡಿಪಿಐಯ ಮತ ಎಡರಂಗಕ್ಕೆ ಬೇಡವೆಂದು ನಿಮಗೆ ಹೇಳಬಹುದೇ ಎಂಬ ಪ್ರಶ್ನೆಗೆ ಅವರು ಸರಿಯಾದ ಪ್ರತ್ಯುತ್ತರ ನೀಡಲಿಲ್ಲ. ಜಮಾಯತ್ ಇಸ್ಲಾಂನ ಮತ ಆಧಾರಿತ ರಾಷ್ಟ್ರ ಆಗ್ರಹಿಸುತ್ತಿತ್ತು. ಇದು ಅತ್ಯಂತ ಅಪಾಯಕಾರಿಯಾದುದಾಗಿದೆ.

 ಎಸ್‌ಡಿಪಿಐ ಮತ್ತು ಆರ್‌ಎಸ್‌ಎಸ್  ಸಮಾನ ಸ್ವರೂಪದ ಸಂಘಟನೆಗಳಾಗಿವೆ. ಆರ್‌ಎಸ್‌ಎಸ್ ಹಿಂದೂ ರಾಷ್ಟ್ರ ನಿರ್ಮಾಣದ ಸಂಕಲ್ಪ ಹೊಂದಿರುವ ಸಂಘಟನೆಯಾಗಿದೆ. ಇಂತಹ ಸಂಘಟನೆಗಳೊಂದಿಗೆ ಚರ್ಚೆ ನಡೆಸಿ ಅವರ ಮತಗಳಿಸುವ ರೀತಿ ಎಡರಂಗ ಹೊಂದಿಲ್ಲ. ಎಡರಂಗ ಸರಕಾರದ ವಿರುದ್ಧ ಯುಡಿಎಫ್ ಮಾಡುತ್ತಿರುವ ಆರೋಪಗಳು ಔಟ್ ಸೋರ್ಸ್ (ಹೊರಗುತ್ತಿಗೆ) ಆಧಾರಿತವಾ ದುದಾಗಿದೆ. ಅದು  ಆಳವಾಗಿ ಚಿಂತನೆ ನಡೆಸುವ ರಾಜಕೀಯ ಒಕ್ಕೂಟವಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಜನರಿಗೆ ಹುಸಿ ಭರವಸೆಗಳನ್ನು ನೀಡುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ನೇತಾರರುಗಳಾದ  ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಬೇಬಿ ಆರೋಪಿಸಿದರು.

You cannot copy contents of this page