ಕಾಸರಗೋಡು: ಕಾಂಗ್ರೆಸ್‌ನಲ್ಲಿ ಸೀಟು ವಿಭಜನೆ ತರ್ಕದ ಹಿನ್ನೆಲೆಯಲ್ಲಿ ಕಾಸರಗೋಡು ಡಿಸಿಸಿ ಕಚೇರಿಯಲ್ಲಿ ನೇತಾರರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಡಿಸಿಸಿ ಉಪಾಧ್ಯಕ್ಷ ಜೇಮ್ಸ್‌ಪಂದಮಾಕಲ್ ಹಾಗೂ ಡಿ.ಕೆ.ಟಿ.ಎಫ್ ಜಿಲ್ಲಾಧ್ಯಕ್ಷ ವಾಸು ದೇವನ್ ಪರಸ್ಪರ ಹೊಡೆದಾಡಿ ಕೊಂಡಿದ್ದಾರೆ. ಈಸ್ಟ್ ಎಳೇರಿ ಪಂಚಾಯತ್‌ನಲ್ಲಿ ಸೀಟು ವಿಭಜನೆಗೆ ಸಂಬಂಧಿಸಿ ಹೊಡೆದಾಟ ನಡೆದಿರುವು ದಾಗಿ ಹೇಳಲಾಗುತ್ತಿದೆ. ಈ ಹಿಂದೆ ಕಾಂಗ್ರೆಸ್‌ನಿಂದ ದೂರವಾದ ಜೇಮ್ಸ್ ಪಂದಮಾಕಲ್ ಡಿಡಿಎಫ್ ಎಂಬ ಸಂಘಟನೆಯನ್ನು ರೂಪೀಕರಿಸಿದ್ದರು. ಅನಂತರ ಚರ್ಚೆ ನಡೆಸಿ ಕಳೆದ ವರ್ಷ ಅವರ ಸಹಿತ ಏಳು ಮಂದಿಯನ್ನು ಕಾಂಗ್ರೆಸ್‌ಗೆ ಮರು ಸೇರ್ಪಡೆಗೊಳಿ ಸಲಾಗಿತ್ತು. ಈ ಚುನಾವಣೆಯಲ್ಲಿ ಹಲವು ಸೀಟುಗಳನ್ನು ಅವರು ಆಗ್ರಹ ಪಟ್ಟಿದ್ದಾರೆನ್ನಲಾಗಿದೆ. ಇದರ ಹೆಸರಲ್ಲಿ ತರ್ಕ ಹೊರತುಪಡಿಸಲು ನಾಯಕತ್ವ ಕಳೆದ ದಿನ ನಡೆದ ಕಾಂಗ್ರೆಸ್ ಸಭೆಯಲ್ಲಿ ಐದು ಸೀಟುಗಳನ್ನು ನೀಡಲು ತೀರ್ಮಾನಿಸಿತ್ತು. ಬಳಿಕ ಈ ನಿರ್ಧಾರವನ್ನು ಪ್ರತಿಭಟಿಸಿ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್‌ರನ್ನು ಸಹಿತ ನೇತಾರರನ್ನು ನಿಂದಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಕಂಡುಬಂದಿತ್ತು. ತರ್ಕ ತೀವ್ರಗೊಳ್ಳುವುದರೊಂದಿಗೆ ಇವರಿಗೆ ಎರಡು ಸೀಟುಗಳನ್ನು ಮಾತ್ರ ನೀಡಿದರೆ ಸಾಕೆಂದು ಕಾಂಗ್ರೆಸ್ ಸಭೆ ನಿರ್ಧರಿಸಿದ್ದು, ಇದು ಹೊಡೆದಾಟಕ್ಕೆ ದಾರಿಮಾಡಿ ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಕೆಪಿಸಿಸಿ ಉಪಾಧ್ಯಕ್ಷ ಎಂ. ಲಿಜು ಭಾಗವಹಿಸಿದ್ದ ಕೋರ್ ಕಮಿಟಿ ಸಭೆಯಲ್ಲಿ ಹೊಡೆದಾಟ ನಡೆದಿದೆ. ಹೊಡೆದಾಟ ಕುರಿತು ತನಿಖೆ ನಡೆಸುವುದಾಗಿ ಎಂ. ಲಿಜು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಅಮಾನತು
ಕಾಸರಗೋಡು: ಡಿಸಿಸಿ ಕಚೇರಿಯಲ್ಲಿ ಸಂಭವಿಸಿದ ಹೊಡೆದಾಟದ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸಿ ಪಕ್ಷಕ್ಕೆ ಅಪಕೀರ್ತಿ ಉಂಟುಮಾಡಿದ ಕಾಸರಗೋಡು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೆ.ಎಂ. ಸಫ್ವಾನ್ ಕುನ್ನಿಲ್‌ರನ್ನು ಪಕ್ಷದಿಂದ ಅಮಾನತುಗೊಳಿಸಿರುವುದಾಗಿ ಡಿಸಿಸಿ ಅಧ್ಯಕ್ಷ ತಿಳಿಸಿದ್ದಾರೆ.







