ಮಂಗಲ್ಪಾಡಿ: ಪ್ರತಾಪನಗರ ತಿಂಬರ ನಿವಾಸಿ ಹಿರಿಯ ಕೃಷಿಕ ನಾರಾಯಣ ಹೊಳ್ಳ (88) ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ರವಿಶಂಕರ ಹೊಳ್ಳ, ರಾಘವೇಂದ್ರ ಹೊಳ್ಳ, ನಾಗರಾಜ ಹೊಳ್ಳ, ಗುರುಪ್ರಸಾದ್ ಹೊಳ್ಳ, ಸೊಸೆಯಂದಿರಾದ ಗೀತಾ, ದೀಪಿಕಾ, ಸಂಗೀತ, ಸಹೋದರಿಯರಾದ ವಾಗೀಶ್ವರೀ, ಗೌರಿ, ಜಾಹ್ನವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ಗುಲಾಬಿ ಹೊಳ್ಳ, ಸಹೋದರ ರಾಮಕೃಷ್ಣ ಹೊಳ್ಳ, ಸಹೋದರಿ ಮಹಾಲಕ್ಷಿ÷್ಮÃ ಈ ಹಿಂದೆ ನಿಧನರಾಗಿದ್ದಾರೆ.
