ಕುಂಬಳೆ: ಕುಂಬಳೆಯ ಹಿರಿಯ ಲಾರಿ ಚಾಲಕ ಅಬ್ದುಲ್ಲ (75) ಎಂಬವರು ನಿಧನಹೊಂದಿದರು. ಕುಂಬಳೆ ನಿವಾಸಿಯಾದ ಇವರು ಪ್ರಸ್ತುತ ಬಂಬ್ರಾಣದಲ್ಲಿ ವಾಸಿಸುತ್ತಿದ್ದರು.
ಮೃತರು ಪತ್ನಿ ಫಾತಿಮ, ಮಕ್ಕಳಾದ ಕಬೀರ್, ನೌಶಾದ್, ನೌಫಲ್, ರಶೀದ, ಸೈನಾಸ್, ಬಲ್ಕೀಸ್, ರಾಬಿಯ, ನೌಶೀನ, ಅಳಿಯ-ಸೊಸೆಯಂದಿರಾದ ರಿಯಾನ, ಇಶಾನ, ಇಬ್ರಾಹಿಂ, ಖಮರುದ್ದೀನ್, ಜಲೀಲ್, ಅಬು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಕುಂಬಳೆ ಬದರ್ ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು.







