ಕಾಸರಗೋಡು: ತಲಪಾಡಿ-ಚೆಂಗಳ ರೀಚ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಗಳ ಕೆಲಸಗಳು ಅಂತಿಮ ಹಂತದಲ್ಲಿದೆಯೆಂದು ನಿರ್ಮಾಣ ಕಂಪೆನಿ ಅಧಿಕಾರಿಗಳು ಹಕ್ಕು ಮಂಡಿಸುತ್ತಿದ್ದರೂ ಚೆರ್ಕಳದಲ್ಲಿ ಸರ್ವೀಸ್ ರಸ್ತೆಗಳ ನಿರ್ಮಾಣ ಈಗಲೂ ವಿಳಂಬಗತಿಯಲ್ಲೇ ಸಾಗುತ್ತಿದೆ. ಚೆಂಗಳದಿಂದ ಚೆರ್ಕಳದವರೆಗಿರುವ ಸರ್ವೀಸ್ ರಸ್ತೆಯ ನಿರ್ಮಾಣದಲ್ಲಿ ನಿಧಾನಗತಿ ಕಂಡುಬರುತ್ತಿದ್ದು, ಇದರಿಂದರಿಂದಾಗಿ ಇಲ್ಲಿ ಸಂಚಾರ ಸಮಸ್ಯೆ, ಕಾಲ್ನಡೆಗೆ ಪ್ರಯಾಣಿಕರಿಗೆ ತೊಂದರೆ ಮುಂದುವರಿಯುತ್ತಿದೆ.
ಸರ್ವೀಸ್ ರಸ್ತೆ ನಿರ್ಮಾಣ ನಿಧಾನಗತಿಯಲ್ಲಿರುವಂತೆಯೇ ಅಗಲ ಕಿರಿದಾದ ಈ ರಸ್ತೆಯಲ್ಲಿ ದ್ವಿಮುಖ ಸಂಚಾರ ಏರ್ಪಡಿಸಿರುವುದು ಪ್ರಯಾಣಿಕರಿಗೆ ಹಾಗೂ ವಾಹನಗಳಿಗೆ ಅವಳಿ ಸಂಕಷ್ಟ ತಂದಿತ್ತಿದೆ. ಕಾಸರಗೋಡು ಹೊಸ ಬಸ್ ನಿಲ್ದಾಣದಿಂದ ಚೆರ್ಕಳ ವರೆಗಿರುವ ಸರ್ವೀಸ್ ರಸ್ತೆ ಹಲವು ಕಡೆಗಳಲ್ಲಿ ಅಗಲ 4 ಮೀಟರ್ ಮಾತ್ರವಾಗಿದೆ. ಇದರಲ್ಲಿ ಅದೇಗೆ ವಾಹನ ಅತ್ತಿತ್ತ ಚಲಾಯಿಸುವುದೆಂಬ ಪ್ರಶ್ನೆಗೆ ಅಧಿಕಾರಿಗಳು ಮೌನವಾಗಿದ್ದಾರೆ. ಇದರೆಡೆಯಲ್ಲಿ ಸರ್ವೀಸ್ ರಸ್ತೆಯಲ್ಲಿ ಅನಧಿಕೃತ ವಾಹನ ಪಾರ್ಕಿಂಗ್‌ಗಳು ಕಂಡುಬರುತ್ತಿದ್ದು, ಇದೆಲ್ಲವುಗಳಿಂದಾಗಿ ಸರ್ವೀಸ್ ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿವೆ.







