ಪಾಲಕ್ಕಾಡ್: ಈ ಹಿಂದೆ ದಾಖಲಿಸಲಾದ ಎರಡು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಲಭಿಸಿ ಬಂಧಿಸಲು ಸಾಧ್ಯವಾಗದ ಪಾಲಕ್ಕಾಡ್ ಶಾಸಕ ಹಾಗೂ ಕಾಂಗ್ರೆಸ್‌ನಿಂದ ಉಚ್ಛಾಲಿಸಲ್ಪಟ್ಟಿರುವ ರಾಹುಲ್ ಮಾಂಕೂಟತ್ತಿಲ್ ಅದೇ ರೀತಿಯ ಮೂರನೇ ಪ್ರಕಕರಣದಲ್ಲಿ ಕೊನೆಗೂ ಬಂಧಿತನಾಗಿ ನ್ಯಾಯಾಂಗ ಬಧನಕ್ಕೊಳಗಾಗಿ ಮಾವೇಲಿಕ್ಕರ ಸಬ್ ಜೈಲು ಸೇರಿದ್ದಾನೆ. ವಿವಾಹಿತೆಯಾದ ಕೋಟ್ಟಯಂ ನಿವಾಸಿ ಹಾಗೂ ಈಗ ಕೆನಡಾದಲ್ಲಿರುವ 31ರ ಹರೆಯದ ಯುವತಿ ರಾಹುಲ್ ವಿರುದ್ಧ ಜನವರಿ 5ರಂದು ಇ ಮೈಲ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಳು. 2024 ಎಪ್ರಿಲ್ 8ರಂದು ತಿರುವಲ್ಲಾದ ಖಾಸಗಿ ಹೋಟೆಲೊಂದಕ್ಕೆ ರಾಹುಲ್ ನನ್ನನ್ನು ಕರೆಸಿ ಅಲ್ಲಿ ನನಗೆ ಅತೀ ಕ್ರೂರ ರೀತಿಯಲ್ಲಿ ಲೈಂಗಿಕ ಕಿರುಕುಳ ಹಾಗೂ ದೈಹಿಕ ಹಿಂಸೆ ನೀಡಿದ್ದನೆಂದು ಯುವತಿ ದೂರಿನಲ್ಲಿ ಆರೋಪಿಸಿದ್ದಳು. ಅದಕ್ಕೆ ಸಂಬಂಧಿಸಿ ಪೊಲೀಸರು ರಾಹುಲ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಮೊನ್ನೆ ತಡರಾತ್ರಿ ರಾಹುಲ್‌ನನ್ನು ಬಂಧಿಸಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಾಲಕ್ಕಾಡ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ರಾಹುಲ್ ಅಗತ್ಯದ ಪೂರ್ವಭಾವಿ ಸಿದ್ಧತೆಯಲ್ಲಿ ತೊಡಗಿದ್ದರು. ಈ ವೇಳೆಯಲ್ಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ರಾಹುಲ್ ವಿರುದ್ಧ ಇದೇ ರೀತಿ ಈ ಹಿಂದೆ ಇತರ ಇಬ್ಬರು ಯುವತಿಯರು ಲೈಂಗಿಕ ಆರೋಪ ಹೊರಿಸಿ ದೂರು ನೀಡಿದ್ದರು. ಅದರಂತೆ ಪೊಲೀಸರು ರಾಹುಲ್ ವಿರುದ್ಧ ಎgಡು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಎರಡೂ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಲಭಿಸಿತ್ತು ಮಾತ್ರವಲ್ಲ ಈ ಪ್ರಕರಣಘಳಿಗೆ ಸಂಬಂಧಿಸಿ ಜನವರಿ 21ರ ತನಕ ರಾಹುಲ್‌ನನ್ನು ಬಂಧಿಸದಂತೆ ಹೈಕೋರ್ಟ್ ಪೊಲೀಸರಿಗೆ ನಿರ್ದೇಶ ನೀಡಿತ್ತು. ಅದರಿಂದಾಗಿ ಈ ಎರಡೂ ಪ್ರಕರಣಘಳಲ್ಲಿ ರಾಹುಲ್‌ನನ್ನು ಬಂಧಿಸಲು ಪೊಲೀಸರಿಗೆ ಈತನಕ ಸಾಧ್ಯವಾಗಲಿಲ್ಲ. ಅದರ ಬೆನ್ನಲ್ಲೇ ಅದೇ ರೀತಿಯ ಮೂರನೇ ಪ್ರಕರಣವನ್ನು ಪೊಲೀಸರು ದಾಖಲಿಸಿ ಅದಕ್ಕೆ ಸಂಬಂಧಿಸಿ ರಾಹುಲ್‌ನನ್ನು ನಿನ್ನೆ ರಾತ್ರಿ 12.30ಕ್ಕೆ ಪಾಲಕ್ಕಾಡ್‌ನ ಹೋಟೆಲೊಂದರಿಂದ ವಶಕ್ಕೆ ತೆಗೆದುಕೊಂಡು ಮುಂಜಾನೆ ೫.೧೫ರ ವೇಳೆಗೆ ಪತ್ತನಂತಿಟ್ಟ ಎಆರ್ ಕ್ಯಾಂಪ್‌ಗೆ ಸಾಗಿಸಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ರಾಹುಲ್‌ನನ್ನು ವಿಚಾರಣೆ ಗೊಳಪಡಿಸಿದ ಬಳಿಕ ನಿನ್ನೆ ಬೆಳಿಗ್ಗೆ 7.30ಕ್ಕೆ ಬಂಧನ ದಾಖಲಿಸಿ ನಂತರ ರಾಹುಲ್‌ನನ್ನು ಪತ್ತನಂತಿಟ್ಟ ಜನರಲ್ ಆಸ್ಪತ್ರೆಗೆ ಸಾಗಿಸಿ ವೈದ್ಯಕೀಯ ತಪಾಸಣೆಗೊಳ ಪಡಿಸಲಾ ಯಿತು. ಮಾತ್ರವಲ್ಲ ರಾಹುಲ್‌ನ ಡಿಎನ್‌ಎ ಸ್ಯಾಂಪಲ್ ಸಂಗ್ರಹಿಸಲಾಯಿ ತಲ್ಲದೆ ಅವರ ಲೈಂಗಿಕ ಸಾಮರ್ಥ್ಯದ ಬಗ್ಗೆಯೂ ವೈದ್ಯಕೀಯ ಪರೀಕ್ಷೆಗೊಳಪಡಿ ಸಲಾಯಿತು. ನಂತರ ರಾಹುಲ್‌ನನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ಮಾವೇಲಿಕ್ಕರ ಸಬ್ ಜೈಲಿನಲ್ಲಿ 14 ದಿನಗಳ ತನಕ ಬಂಧನದಲ್ಲಿರಿಸಲಾಯಿತು. ಆ ವೇಳೆ ಜೈಲು ಪರಿಸರದಲ್ಲಿ ಡಿವೈಎಫ್‌ಐ ಕಾರ್ಯಕರ್ತರು ಜಮಾಯಿಸಿ ರಾಹುಲ್ ವಿರುದ್ಧ ಘೋಷಣೆ ಕೂಗಿದರು. ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ರಾಹುಲ್‌ನನ್ನು ನ್ಯಾಯಾಂಗ ಬಂಧನದಿಂದ ಮತ್ತೆ ತಮ್ಮ ಕಸ್ಟಡಿಗೆ ಪಡೆದುಕೊಳ್ಳಲು ಎಸ್‌ಐಟಿ ತೀರ್ಮಾನಿಸಿದೆ.







