ಮಂಜೇಶ್ವರ: ಹನ್ನೊಂದರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಸಜಿಪಮೂಡು ಜಡಕೋಡಿ ಎಂಬಲ್ಲಿನ ಅಬ್ದುಲ್ ರಹಿಮಾನ್ (26) ಎಂಬಾತನನ್ನು ನಿನ್ನೆ ತಲಪ್ಪಾಡಿಯಿಂದ ಮಂಜೇಶ್ವರ ಸಿಐ ಜಿಜೀಶ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ 11ರ ಹರೆಯದ ಬಾಲಕಿಗೆ ಕಳೆದ ಆದಿತ್ಯವಾರ ಅಬ್ದುಲ್ ರಹಿಮಾನ್ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಇದರಂತೆ ಈತನ ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದರು.







