ಕಾಸರಗೋಡು: ಕರಂದಕ್ಕಾಡು ಶಾಂತಿ ನಗರ ಶಾರದಾಚಂದಂ ನಿವಾಸ್‌ನ ದಿ| ಚಂದ ಭಂಡಾರಿ ಯವರ ಪತ್ನಿ ಶಾರದಾ ಕೆ. (86) ನಿಧನ ಹೊಂದಿದರು. ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಮೃತರು ಮಕ್ಕಳಾದ ಕೆ. ವಿಜಯ (ನಿವೃತ್ತ ಬ್ಯಾಂಕ್ ಉದ್ಯೋಗಿ), ಕೆ. ಕಸ್ತೂರಿ, ಕೆ. ನಿರ್ಮಲ (ಮಾಜಿ ನಗರಸಭಾ ಕೌನ್ಸಿಲರ್), ಕೆ. ಅಶೋಕ (ಕಾರವಲ್), ಅಳಿಯಂದಿ ರಾದ ರಾಧಾಕೃಷ್ಣ, ದಾಮೋದರ, ಸೊಸೆ ಉಮಾವತಿ, ಸಹೋದರಿಯರಾದ ಅನಸೂಯ, ಅಹಲ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನಿಬ್ಬರು ಸಹೋದರರಾದ ಯಾದವ ಹಾಗೂ ಸುಕುಮಾರ ಈ ಹಿಂದೆ ನಿಧನರಾಗಿದ್ದಾರೆ.







