ನ್ಯಾಯವಾದಿ ಮನೆಯಿಂದ ಭಾರೀ ಪ್ರಮಾಣದ ಚಿನ್ನ, ಬೆಳ್ಳಿ ಆಭರಣಗಳು, ನಗದು ಕಳವು

ಕುಂಬಳೆ:  ನಾಯ್ಕಾಪುನಲ್ಲಿ ನ್ಯಾಯವಾದಿಯ ಮನೆಗೆ ನುಗ್ಗಿದ ಕಳ್ಳರು ಭಾರೀ ಪ್ರಮಾಣದ ಚಿನ್ನ-ಬೆಳ್ಳಿ ಆಭರಣಗಳು ಹಾಗೂ ನಗದು ದೋಚಿದ್ದಾರೆ.  ಕಾಸರಗೋಡು ಬಾರ್‌ನ ನ್ಯಾಯವಾದಿಯಾದ ಚೈತ್ರಾ ಹಾಗೂ ಕುಟುಂಬ ವಾಸಿಸುವ ಮನೆಯಿಂದ ಈ ಕಳವು ನಡೆದಿದೆ. ಮನೆಯ ಹಿಂಭಾಗದ ಬಾಗಿಲು ಕೆಡವಿ ಒಳಗೆ ನುಗ್ಗಿದ ಕಳ್ಳರು ಕಪಾಟುಗಳಲ್ಲಿರಿಸಿದ್ದ 29 ಪವನ್ ಚಿನ್ನ, 25 ಸಾವಿರ ರೂ. ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ 5 ಸಾವಿರ  ರೂಪಾಯಿಗಳನ್ನು ಕಳ್ಳರು ದೋಚಿರುವುದಾಗಿ ತಿಳಿದುಬಂದಿದೆ. ನೆಕ್ಲೇಸ್, ಬಳೆಗಳು, ಉಂಗುರಗಳು, ಬ್ರೇಸ್‌ಲೆಟ್, ಮಾಲೆ, ಬೆಂಡೋಲೆ, ಮಕ್ಕಳ ಸರ, ಮಕ್ಕಳ ಚಿನ್ನದಬಳೆ, ಕಲ್ಲು ಅಳವಡಿಸಿದ ಮಾಲೆ ಮೊದಲಾ ದವುಗಳು ಕಳವುಗೀಡಾದವುಗಳಲ್ಲಿ ಒಳಗೊಂಡಿದೆ. ಒಟ್ಟು 31,67,000 ರೂಪಾಯಿಗಳ ಸೊತ್ತು ಕಳವಿಗೀಡಾ ಗಿದೆಯೆಂದು ಅಂದಾಜಿಸಲಾಗಿದೆ. ನಿನ್ನೆ ಸಂಜೆ ೬ಗಂಟೆಯಿಂದ ರಾತ್ರಿ 8 ಗಂಟೆ ಮಧ್ಯೆ ಕಳವು ನಡೆದಿದೆ.  ಸಂಜೆ 6ಕ್ಕೆ  ಮನೆಗೆ ಬೀಗ ಜಡಿದು ಕುಟುಂಬ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಉತ್ಸವಕ್ಕೆ ತೆರಳಿದ್ದರು. ರಾತ್ರಿ 8 ಗಂಟೆಗೆ ಮರಳಿದಾಗ ಮನೆಯೊಳಗೆ ಬಲ್ಬುಗಳು ಉರಿಯುತ್ತಿರುವುದು ಕಂಡುಬಂದಿದೆ. ಒಳಗೆ ಪ್ರವೇಶಿಸಿ ನೋಡಿದಾಗ ಕಪಾಟುಗಳನ್ನು ಮುರಿದು ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿಗೊಳಿಸಿರುವುದು ಹಾಗೂ  ಕಪಾಟುಗಳಲ್ಲಿದ್ದ ಚಿನ್ನಾಭರಣ, ಹಣ ಕಳವಿಗೀಡಾಗಿರುವುದು ತಿಳಿದು ಬಂದಿದೆ.   ವಿಷಯ ತಿಳಿದು ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಇಂದು ಶ್ವಾನದಳ, ಬೆರಳಚ್ಚು ತಜ್ಞರು ಮನೆಗೆ ತಲುಪಿ ಪರಿಶೀಲನೆ ನಡೆಸಲಿ ದ್ದಾರೆ.  ಕಳವಿನ ಬಗ್ಗೆ ಚೈತ್ರ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

You cannot copy contents of this page