ಶಬರಿಮಲೆಯಲ್ಲಿ ಭಕ್ತರ ನಿಬಿಡತೆಗೆ ಹೊಂದಿಕೊಂಡು ಸ್ಪೋಟ್ ಬುಕ್ಕಿಂಗ್

ಪಂದಳಂ: ಶಬರಿಮಲೆಯಲ್ಲಿ ಇನ್ನು ತೀರ್ಥಾಟಕರ ನಿಬಿಡತೆಗೆ ಹೊಂದಿಕೊಂಡು ಸ್ಪೋಟ್ ಬುಕ್ಕಿಂಗ್ ಸೌಕ ರ್ಯಏರ್ಪಡಿಸಲು ಮುಜರಾಯಿ ಮಂಡಳಿ ತೀರ್ಮಾನಿಸಿದೆ. ಜ್ಯಾರಿಯಲ್ಲಿ ಪ್ರತಿದಿನ ತಲಾ 5೦೦೦ದಷ್ಟು ತೀರ್ಥಾಟಕರಿಗೆ ಸ್ಪೋಟ್ ಬುಕ್ಕಿಂಗ್ ಮೂಲಕ ಪ್ರವೇಶ ನೀಡಲಾಗುತ್ತಿದೆ. ಇದರ ಹೊರತಾಗಿ ವರ್ಚುವಲ್ ಕ್ಯೂ ಮೂಲಕವೂ ಪ್ರವೇಶ ನೀಡಲಾ ಗುತ್ತಿದೆ. ಶಬರಿಮಲೆ  ದೇಗುಲದ 18 ಮೆಟ್ಟಿಲು ಮೂಲಕ ಪ್ರತಿ ನಿಮಿಷಕ್ಕೆ ತಲಾ 85 ಮಂದಿಯನ್ನು ಏರಿಸಿ ಸನ್ನಿಧಾನಕ್ಕೆ ತಲುಪಿಸುವ ಕ್ರಮವನ್ನು ಈಗ ಆರಂಭಿಸಲಾಗಿದೆ. ಇದಕ್ಕೆ ಹೊಂದಿ ಕೊಂಡು ಅಗತ್ಯದಷ್ಟು ಪೊಲೀಸರನ್ನು 18 ಮೆಟ್ಟಿಲಲ್ಲಿ ಕರ್ತವ್ಯಕ್ಕಾಗಿ ನೇಮಿಸಲಾಗಿದೆ. ಸನ್ನಿಧಾನದಲ್ಲಿರುವ ಹೆಲ್ತ್ ಸೆಂಟ ರ್‌ನಲ್ಲಿ ಏಕೋ ಕಾರ್ಡಿ ಯೋಗ್ರಾಫಿ ತಪಾಸಣಾ ಸೌಕರ್ಯ ಏರ್ಪಡಿಸುವ ಹಳ ಕಟ್ಟಡಗಳನ್ನು ಕೆಡಹಿ ಅಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸುವ ತೀರ್ಮಾನ ವನ್ನೂ ಕೈಗೊಳ್ಳಲಾಗಿದೆ. ಶಬರಿಮಲೆ ಮತ್ತು ಪರಿಸರದ ಹೋಟೆಲ್‌ಗಳಿಗೆ ಆರೋಗ್ಯ ಇಲಾಖ ಮತ್ತು ಅಗ್ನಿಶಾಮಕದಳವೂ ಪದೇ ಪದೇ ಪರಿಶೀಲನೆ  ಇನ್ನೊಂದೆಡೆ ಆರಂಭಿಸಿದ್ದಾರೆ.

RELATED NEWS

You cannot copy contents of this page