ತಿರುವನಂತಪುರ: ಮಾರ್ಚ್ 5ರಂದು ಆರಂಭಗೊಂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದು ಕೊನೆಗೊಳ್ಳಲಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಎಪ್ರಿಲ್ 16ರಂದು ಆರಂಭಗೊಳ್ಳಲಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಫಲಿತಾಂಶ ಪ್ರಕಟಗೊಳ್ಳುವಲ್ಲಿ ಅಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ರಾಜ್ಯದಲ್ಲಿ 13 ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಬರೆದಿದ್ದಾರೆ. ರಾಜ್ಯದಲ್ಲಿ 3.031 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಜತೆಗೆ ಮಾರ್ಚ್ ೫ರಂದು ಹೈಯರ್ ಸೆಕೆಂಡರಿ ಮತ್ತು ವೊಕೇಷನಲ್ ಹೈಯರ್ ಸೆಕೆಂಡರಿ ಪರೀಕ್ಷೆಗಳೂ ಆರಂಭಗೊಂಡಿತ್ತು.







