ತೃಶೂರು: 64ನೇ ರಾಜ್ಯ ಶಾಲಾ ಕಲೋತ್ಸವಕ್ಕೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ತೇಕಿನ್‌ಕ್ಕಾಡ್ ಮೈದಾನದಲ್ಲಿರುವ ಪ್ರಧಾನ ವೇದಿಕೆ ಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಲೋತ್ಸವವನ್ನು ಉದ್ಘಾಟಿ ಸಿದರು. ಶಿಕ್ಷಣ ಇಲಾಖೆ ಸಚಿವ ವಿ.ಎಸ್. ಶಿವನ್ ಕುಟ್ಟಿ ಅಧ್ಯಕ್ಷತೆ ವಹಿಸಿದರು. ಇಂದಿನಿಂದ ಈ ತಿಂಗಳ 18ರವರೆಗೆ ಶಾಲಾ ಕಲೋತ್ಸವ ಮುಂದು ವರಿಯಲಿದೆ. 25 ವೇದಿಕೆಗಳಲ್ಲಿಗಾಗಿ 249 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 15,000 ಕ್ಕೂ ಮಿಕ್ಕು ಕಲಾ ಪ್ರತಿಭೆಗಳು ಸ್ಪರ್ಧಿಸುವರು. ಬೆಳಿಗ್ಗೆ ಶಿಕ್ಷಣ ಇಲಾಖೆ ನಿರ್ದೇಶಕ ಎನ್.ಎಸ್.ಕೆ. ಉಮೇಶ್ ಧ್ವಜಾರೋಹಣಗೈದರು. 64ನೇ ರಾಜ್ಯ ಶಾಲಾ ಕಲೋತ್ಸವದ ಹಿನ್ನೆಲೆಯಲ್ಲಿ 64 ಮಕ್ಕಳು ಪಾಲ್ಗೊಂಡ ಕಲಾ ಮಂಡಲದ ನೇತೃತ್ವದಲ್ಲಿ ಸ್ವಾಗತಗೀತೆ ಹಾಡಲಾ ಯಿತು. ಬಿ.ಕೆ. ಹರಿನಾರಾಯಣನ್ ಕಲೋತ್ಸವ ಸ್ವಾಗತಗೀತೆಗೆ ಸಂಗೀತ ನೀಡಿದ್ದಾರೆ. ನಗರದ ಸುತ್ತುಮುತ್ತಲ 20 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ವಾಸ ಸೌಕರ್ಯ ಏರ್ಪಡಿಸ ಲಾಗಿದೆ. 10 ಎಸ್‌ಐಗಳ ಸಹಿತ 12೦೦ರಷ್ಟು ಪೊಲೀಸರು ಕಲೋತ್ಸವ ವನ್ನು ನಿರೀಕ್ಷಿಸುತ್ತಿದ್ದಾರೆ. ಸ್ತ್ರೀಸೌಹಾರ್ದ ಟ್ಯಾಕ್ಸಿಗಳು ಸಂಚಾರ ನಡೆಸಲಿವೆ. 25,೦೦೦ಕ್ಕೂ ಅಧಿಕ ಮಂದಿಗೆ ಆಹಾರ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.







