ಕಾಸರಗೋಡು: ಕರಂದಕ್ಕಾಡಿನಲ್ಲಿ ಸ್ಟಿಕರ್ ಕಟ್ಟಿಂಗ್ ಸಂಸ್ಥೆ ಮಾಲಕರಾಗಿದ್ದ ಪದ್ಮನಾಭ ಆಚಾರ್ಯ (59) ನಿಧನ ಹೊಂದಿದರು. ಅಸೌಖ್ಯ ತಗಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕಳೆದ ಒಂದು ವಾರದಿಂದ ತೀವ್ರನಿಗಾ ಘಟಕದಲ್ಲಿದ್ದ ಇವರು ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಸಂಧ್ಯಾರಾಣಿ, ಮಕ್ಕಳಾದ ಆಕಾಶ್‌ಪದ್ಮ, ಸುಜೀಶ್‌ಪದ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






