ಕಳವುಗೈದ ಕಾರನ್ನು ನಂಬ್ರ ಪ್ಲೇಟ್ ಬದಲಿಸಿ ಮಾರಾಟ: 1.40 ಲಕ್ಷ ರೂ. ಓರ್ವ ಆರೋಪಿಯ ಮನೆಯಿಂದ ಪತ್ತೆ

ಕಾಸರಗೋಡು: ಉಳಿಯತ್ತಡ್ಕ ಸಮೀಪದ ಇಜ್ಜತ್‌ನಗರ ಸೆಕೆಂಡ್ ಸ್ಕ್ರೀಟ್ ಮುಸ್ತಫ ಮಂಜಿಲ್‌ನ ಮೊಹಮ್ಮದ್ ಮುಸ್ತಫ ಎಂಬವರ ಮನೆಯಂಗಳದಿಂದ ಡಿಸೆಂಬರ್ 1ರಂದು ರಾತ್ರಿ ಕಳವುಗೈದ 12.8 ಲಕ್ಷ ರೂ. ಮೌಲ್ಯದ ಕಾರನ್ನು  ಈ ಪ್ರಕರಣದ ಮೂರನೇ ಆರೋಪಿ ಪಾಲಕ್ಕಾಡ್ ಜಿಲ್ಲೆಯ ಮಣ್ಣಾರ್ ಕಾಡ್ ಪುಂಜಂಕೋಡ್ ಪುದುಕುಳಂ ವೀಟಿಲ್‌ನ ಪಿ.ಕೆ. ಅಸರುದ್ದೀನ್ (36) 1.7 ಲಕ್ಷ ರೂ.ಗೆ ಇತರ ಇಬ್ಬರು ಆರೋಪಿಗಳಿಗೆ ಮಾರಾಟ ಮಾಡಿದ್ದನೆಂದು ವಿದ್ಯಾನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅಸರುದ್ದೀನ್‌ನ ಹೊರತಾಗಿ ದೇಳಿ ಅರಮಂಗಾನ ರಸ್ತೆಯ  ರಂಜಾನ್ ಸುಲ್ತಾನ್ ಬಶೀರ್ (25) ಮತ್ತು ತಳಂಗರೆ ತೆರುವತ್ ಖಲೀಲ್ ಮಂಜಿಲ್‌ನ ಪಿ.ಎಚ್. ಹಮ್ನಾಸ್ (25) ಎಂಬಿವ ರನ್ನು  ವಿದ್ಯಾನಗರ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇವರನ್ನು ನ್ಯಾಯಾ ಲಯದ ನಿರ್ದೇಶದಂತೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಬಂಧಿತ ಆರೋಪಿಗಳ ಪೈಕಿ ರಂಜಾನ್ ಸುಲ್ತಾನ್ ಬಶೀರ್ ಕಾರು ಮಾಲಕ  ಮುಹಮ್ಮದ್  ಮುಸ್ತಫರ  ಇನ್ನೊಂ ದು ವಾಹನದ ಚಾಲಕನೂ ಆಗಿದ್ದಾನೆ. ಆತ ತನ್ನ ಸಂಬಂಧಿಕನಾಗಿ ರುವ ಇನ್ನೋರ್ವ ಆರೋಪಿ ಹಮ್ನಾಸ್ ಸೇರಿ ಕಾರು ಮಾಲ ಕನಿಗೆ ತಿಳಿಯದೆ  ಕೀಲಿ ಕೈ ತೆಗೆದು ಕಾರನ್ನು ಕಳವುಗೈದಿ ದ್ದರೆಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿ 32 ಸಾವಿರ ರೂ. ನಗದು, ಕ್ರೆಡಿಟ್ ಕಾರ್ಡ್‌ಗಳು ಮತ್ತು ವಾಹನಕ್ಕೆ ಸಂಬಂಧಿಸಿ ದಾಖಲೆ ಪತ್ರಗಳಿದ್ದವು. ಅವುಗಳನ್ನು ಆರೋಪಿಗಳು ಅಪಹರಿಸಿದ್ದಾರೆ. ನಂತರ ಕಾರಿನ ಅಸಲಿ ನಂಬ್ರ ಪ್ಲೇಟ್ ಬದಲಾಯಿಸಿ ತಮಿಳುನಾಡಿನ ನಕಲಿ ನಂಬ್ರ ಅಳವಡಿಸಿ  ಕಾರನ್ನು ಪೆರಿಂದಲ್ ಮಣ್ಣ್‌ಗೆ ತಲುಪಿಸಿ ಮೂರನೇ ಆರೋಪಿ ಅಸರುದ್ದೀನ್‌ಗೆ 1.7 ಲಕ್ಷ ರೂ.ಗೆ ಮಾರಾಟ ಮಾಡಿದ್ದ ರೆಂದು ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಲಭಿಸಿದ 1.40 ಲಕ್ಷ ರೂ.ವನ್ನು ಎರಡನೇ ಆರೋಪಿಯ ಮನೆಯಿಂದ ಪತ್ತೆಹಚ್ಚಲಾಗಿದೆ. ಮಾತ್ರವಲ್ಲ ಕಾರಿನ ಅಸಲಿ ನಂಬ್ರ ಪ್ಲೇಟ್‌ನ್ನು ಪೆರುಂಬಳ ಕುಂಞಡ್ಕದಿಂದ  ಆರೋಪಿಗಳ ಸಹಾಯದಿಂದಲೇ ಪತ್ತೆಹಚ್ಚಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಕಾರನ್ನು ಪಾಲಕ್ಕಾಡ್ ಅಗಳಿ   ಠಾಣೆ ಪೊಲೀಸರ ಸಹಾಯದೊಂದಿಗೆ  ತಮಿಳುನಾಡು ಮೇಟುಪಾಳಯದಿಂದ  ವಿದ್ಯಾನಗರ ಪೊಲೀಸರು ಪತ್ತೆಹಚ್ಚಿ  ಮೂರನೇ ಆರೋಪಿ ಅಸರುದ್ದೀನ್‌ನನ್ನು ಬಂಧಿಸಿದ್ದರು. ಆತನನ್ನು ವಿಚಾರಣೆಗೊಳಪಡಿಸಿದಾಗ ಕಾರನ್ನು ಒಂದನೇ ಮತ್ತು ಎರಡನೇ ಆರೋಪಿಗಳು ಸೇರಿ ತನಗೆ ಮಾರಾಟ ಮಾಡಿದ್ದರೆಂದು ತಿಳಿಸಿದ್ದನು.ಇದರಂತೆ ಇತರ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು.  ಕಳವುಗೈದ ಕಾರನ್ನು ಕೊಯಂಬತ್ತೂರಿಗೆ ಸಾಗಿಸಿ ಬಿಡಿ ಭಾಗಗಳನ್ನು ಮಾರಾಟ ಮಾಡುವ ಯೋಜನೆಯನ್ನು ಆರೋಪಿ ಅಸರುದ್ದೀನ್ ಹಾಕಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page