ಪೆರ್ಮುದೆ ಪೇಟೆಯಲ್ಲಿ ಬೀದಿನಾಯಿಗಳ ಹಿಂಡು: ಸ್ಥಳೀಯರಲ್ಲಿ ಭೀತಿ

ಬಂದ್ಯೋಡು: ಪೆರ್ಮುದೆ ಪೇಟೆಯಲ್ಲಿ ಬೀದಿ ನಾಯಿಗಳ ಹಿಂಡು ರಸ್ತೆಯಲ್ಲಿ ಅಲೆದಾಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಕಳೆದ ಹಲವು ದಿನಗಳಿಂದ ಇಲ್ಲಿನ ಪೇಟೆಯಲ್ಲಿ ಸುಮಾರು 10ರಷ್ಟು ಬೀದಿ ನಾಯಿಗಳು ರಸ್ತೆಯಲ್ಲಿ, ಅಂಗಡಿ ಪರಿಸರಲ್ಲಿ ಕಚ್ಚಾಡಿಕೊಂಡು ಅಲೆದಾಡುತ್ತಿರುವುದು ಪಾದಚಾರಿಗಳಲ್ಲಿ ಆತಂಕ ಉಂಟುಮಾಡಿದೆ. ದಿನನಿತ್ಯ ಮಕ್ಕಳ ಸಹಿತ ಊರವರ ಸಂಚಾರಕ್ಕೆ ಹಾಗೂ ವಾಹನ ಸವಾರರಿಗೆ ಭೀತಿ ಉಂಟಾಗಿದೆ. ವಿವಿಧ ಕಡೆಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ಹಲವು ಮಂದಿ ಗಾಯಗೊಂಡ ಘಟನೆ ನಡೆದಿದೆ. ಸಂಬAಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

You cannot copy contents of this page