ಕಾಸರಗೋಡು: ಬೇಸಿಗೆ ಮಳೆ ತೀವ್ರಗೊಳ್ಳದ ಹಿನ್ನೆಲೆಯಲ್ಲಿ ಹೊಳೆಗಳು, ಜಲಮೂಲಗಳು ಬತ್ತಿ ಬರಡಾಗಿದ್ದು, ಜಿಲ್ಲೆ ತೀವ್ರ ಬರ ಎದುರಿಸುವ ಹಾಗೂ ಕುಡಿ ಯುವ ನೀರು ಕ್ಷಾಮಕ್ಕೆ ತುತ್ತಾಗುವ ಸಾಧ್ಯತೆ ಕಂಡುಬರುತ್ತಿದೆ. ಬೇಸಿಗೆಯ ಬಿಸಿ ಅತೀವ ಅಸಹನೀಯವಾಗಿ ಮುಂದುವರಿ ಯುತ್ತಿದೆ. ಜನರು ಬೇಯುತ್ತಿದ್ದು, ಕುಡಿ ಯುವ ನೀರು ಕ್ಷಾಮ ಕೂಡ ಎದುರಿ ಸುತ್ತಿರುವುದರಿಂದ ಅತ್ಯಂತ ಸಂಕಷ್ಟ ಉಂಟಾಗಿದೆ. ಕೃಷಿಗೆ ಅಗತ್ಯವಾಗಿರುವ ನೀರು ಲಭಿಸದ ಹಿನ್ನೆಲೆಯಲ್ಲಿ ಕೃಷಿಕರು ಸಂದಿಗ್ಧತೆಯಲ್ಲಿದ್ದಾರೆ. ಹೊಳೆಗಳು ಬತ್ತಿ ಬರಡಾದ ಕಾರಣ ಕೃಷಿಗಾಗಿ ಇಲ್ಲಿಂದ ಉಪಯೋಗಿಸುತ್ತಿದ್ದ ನೀರು ಇಲ್ಲದಂತಾಗಿದೆ.
ಕುಡಿಯುವ ನೀರು ಕ್ಷಾಮದಿಂದಾಗಿ ಜನರು ಬೀದಿಗಿಳಿಯಲು ಆರಂಭಿಸಿರುವು ದರೊಂದಿಗೆ ಸ್ಥಳೀಯಾಡಳಿತ ಸಂಸ್ಥೆಗಳು ಟ್ಯಾಂಕರ್ ಲಾರಿಗಳಲ್ಲಿ ಕುಡಿಯುವ ನೀರು ವಿತರಣೆ ಆರಂಭಿಸಿವೆ. ಗುತ್ತಿಗೆ ಆಧಾರದಲ್ಲಿ ನೀರು ಖರೀದಿಸಿ ಪಂಚಾಯತ್‌ಗಳು ವಿತರಣೆ ನಡೆಸುತ್ತಿವೆ. ವಿಧಾನಸಭಾ ಚುನಾವಣೆ ನೀತಿ ಸಂಹಿತೆಯಿಂದಾಗಿ ಕುಡಿಯುವ ನೀರು ಕ್ಷಾಮ ಎದುರಿಸುವ ಪ್ರದೇಶಗಳಲ್ಲಿ ಕುಡಿಯುವ ನೀರು ತಲುಪಿಸಲು ಕೂಡ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಾಧ್ಯವಾಗಿರಲಿಲ್ಲ. ಇದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಹಲವು ಕಾಲಗಳಿಂದ ಕುಡಿಯುವ ನೀರು ಕ್ಷಾಮ ಎದುರಿಸುವ ಪ್ರದೇಶಗಳಲ್ಲಿ ಯೋಜನೆಗಳನ್ನು ಆವಿಷ್ಕಾರಿಸಿ ಜ್ಯಾರಿಗೊಳಿಸಲು ಈ ಮೊದಲು ಸರಕಾರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಿರ್ದೇಶ ನೀಡಿತ್ತಾದರೂ ಅದು ಕೇವಲ ಘೋಷಣೆಗೆ ಮಾತ್ರ ಸೀಮಿತಗೊಂಡಿದೆ. ಸಾರ್ವಜನಿಕ ಬಾವಿಗಳನ್ನು ಶುಚೀಕರಿಸಲು, ಕೊಳವೆ ಬಾವಿಗಳನ್ನು ದುರಸ್ತಿಗೊಳಿ ಸಲು ಯಾವುದೇ ಕ್ರಮ ಉಂಟಾಗುತ್ತಿಲ್ಲ. ಈಗ ಅಗತ್ಯಕ್ಕೆ ಬೇಸಿಗೆ ಮಳೆ ಲಭಿಸದಿರುವುದರಿಂದ ಮತ್ತಷ್ಟು ಸಂದಿಗ್ಧತೆ ಉಂಟಾಗಿದೆ. ಬೇಸಿಗೆಯ ಬಿಸಿ ಮೇ ಕೊನೆಯವರೆಗೆ ಮುಂದುವರಿಯ ಬಹುದೆಂದು ಹವಾಮಾನ ತಜ್ಞರು ಮುನ್ನೆಚ್ಚರಿಕೆ ನೀಡಿದ್ದು, ಇದು ದೊಡ್ಡ ಆತಂಕಕ್ಕೆ ಕಾರಣ ವಾಗಿದೆ. ಭತ್ತ, ತರಕಾರಿ, ತೆಂಗು, ಕಂಗು ಮೊದಲಾದವುಗಳಿಗೆ ನೀರು ಲಭಿಸದಿದ್ದರೆ ನಾಶವಾಗಿ ಹೋಗುವ ಸ್ಥಿತಿ ಇದೆ. ಇದು ಕೃಷಿಕರಿಗೆ ಭಾರೀ ಹೊಡೆತ ನೀಡಲಿದೆ. ಗ್ರಾಮೀಣ ಪ್ರದೇಶದ ಪಂಚಾಯತ್‌ಗಳಲ್ಲೂ ಕೂಡ ನೀರಿನ ಕ್ಷಾಮ ತೀವ್ರಗೊಂಡಿದೆ ಎನ್ನಲಾಗಿದೆ.







