ದರ್ಸ್ ವಿದ್ಯಾರ್ಥಿ ನಾಪತ್ತೆ

ಉಪ್ಪಳ: ದರ್ಸ್ ವಿದ್ಯಾರ್ಥಿ ಯೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಪೊಸೋಟು ಸತ್ಯಡ್ಕ ಮುತ್ತುಕುಂಜ ಹೌಸ್‌ನ  ಅಬೂಬಕ್ಕರ್‌ರ ಪುತ್ರ ಯೂಸಫ್ ಖಲಂದರ್ ಬಾಬ (14) ನಾಪತ್ತೆ ಯಾದ ವಿದ್ಯಾರ್ಥಿಯಾಗಿದ್ದಾನೆ.  ನಿನ್ನೆ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೋದ ಬಳಿಕ ಪುತ್ರ ಮರಳಿ ಬಂದಿಲ್ಲವೆಂದು ತಿಳಿಸಿ ಅಬೂ ಬಕ್ಕರ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂ ಭಿಸಿದ್ದಾರೆ. ವಿದ್ಯಾರ್ಥಿಯ ಮೊಬೈಲ್ ಫೋನ್  ಮನೆಯಲ್ಲೇ ಇದೆಯೆಂದೂ ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page