ಪೆರಿಯ: ಕೇರಳ- ಕೇಂದ್ರ ವಿವಿಯಲ್ಲಿ 9ನೇ ಪದವಿ ಪ್ರದಾನ ಸಮ್ಮೇಳನ ಜರಗಿದ್ದು, ಡಾ. ಎನ್. ಕಲೈಶೆಲ್ವಿ ಪ್ರಧಾನ ಭಾಷಣ ಮಾಡಿದರು. 2000ದಷ್ಟು ಮಂದಿ ಭಾಗವಹಿಸಿದ ಕಾರ್ಯಕ್ರಮದಲ್ಲಿ 2025ರಲ್ಲಿ ಅಧ್ಯಯನ ಪೂರ್ತಿಗೊಳಿಸಿದ 923 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. 36 ಮಂದಿಗೆ ಪದವಿ, 771 ಮಂದಿಗೆ ಸ್ನಾತಕೋತ್ತರ ಪದವಿ, 36 ಮಂದಿಗೆ ಪಿಎಚ್ಡಿ, 80 ಮಂದಿ ಪಿಜಿ ಡಿಪ್ಲೊಮಾ ಪದವಿ ಪಡೆದರು. ಇದರಲ್ಲಿ 750 ಮಂದಿ ನೇರವಾಗಿ ಭಾಗವಹಿಸಲು ನೋಂದಾಯಿಸಿದ್ದರು. ವಿವಿಧ ಅಧ್ಯಯನ ಇಲಾಖೆಗಳಲ್ಲಿ ಉನ್ನತ ಜಯಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಯಿತು.
ಐಶ್ವರ್ಯ ವಿ, ನಮಿತಾ ಲಕ್ಷ್ಮಿ ಪಿ.ವಿ, ಅಶ್ವತಿ ಆರ್.ಎಸ್, ಮೀವಲ್ ಜಿನಟ್, ಮಂಜುಶ್ರೀ ಶಿವಾನಿ, ಅಖಿಲಾ ಎಸ್. ಎಂಬಿವರು ಪದಕಕ್ಕೆ ಅರ್ಹರಾದರು.






