ಸುವರ್ಣಗಿರಿ ಹೊಳೆಯ ಸೇತುವೆಯ ಆವರಣ ಕುಸಿತ: ಮುಟ್ಟಂ-ಬೇರಿಕೆ ರಸ್ತೆಯಲ್ಲಿ ಅಪಾಯಭೀತಿ

ಕುಂಬಳೆ: ಮಂಗಲ್ಪಾಡಿ ಪಂಚಾಯತ್‌ನ ಸುವರ್ಣಗಿರಿ ಹೊಳೆಗೆ ನಿರ್ಮಿಸಿದ ಸೇತುವೆಯ ಆವರಣದ ಒಂದು ಭಾಗ ಕುಸಿದು ಬಿದ್ದಿದ್ದು, ಇದರಿಂದ ಪ್ರಯಾಣಿಕರು ಆತಂಕಪಡುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಇದಾಗಿದ್ದು, ಇದುವೇ ಆವರಣ ಕುಸಿಯಲು ಕಾರಣವೆಂದು ನಾಗರಿಕರು ತಿಳಿಸುತ್ತಿದ್ದಾರೆ. ಇದರಿಂದ ಮುಟ್ಟಂ-ಬೇರಿಕೆ ರಸ್ತೆಯಲ್ಲಿ ಸಂಚಾರಕ್ಕೆ ಅಪಾಯಭೀತಿಯೊ ಡ್ಡುತ್ತಿದೆ. ಬೇರಿಕೆ ಬೀಚ್‌ಗೆ ತೆರಳುವ ಪ್ರಧಾನ ರಸ್ತೆ ಇದಾಗಿದೆ. ಈ ಭಾಗ ದಿಂದ ೫೦೦ರಷ್ಟು ಕುಟುಂಬಗಳು ರಾಷ್ಟ್ರೀಯ ಹೆದ್ದಾರಿಗೆ ತಲುಪಬೇಕಾ ದರೆ ಇದೇ ರಸ್ತೆಯಲ್ಲಿ ತೆರಳಬೇಕಾಗು ತ್ತದೆ. ದಿನಂಪ್ರತಿ ಶಾಲಾ ಬಸ್‌ಗಳ ಸಹಿತ ನೂರಾರು ವಾಹನಗಳು ಈ ಸೇತುವೆ ಮೇಲೆ ಸಂಚರಿಸುತ್ತಿವೆ. ೩೦ ವರ್ಷಗಳ ಹಿಂದೆ ನೀರಾವರಿ ಇಲಾಖೆ ಸುವರ್ಣಗಿರಿ ಹೊಳೆಗೆ ಸೇತುವೆ ನಿರ್ಮಿಸಿತ್ತು. ಸೇತುವೆಯ ಆವರಣ ಇದೀಗ ಕುಸಿದಿರುವುದು ದೊಡ್ಡ ಅಪಾಯಕ್ಕೆ ಕಾರಣವಾಗಲಿದೆ ಯೆಂದು ನಾಗರಿಕರು  ತಿಳಿಸುತ್ತಿದ್ದಾರೆ. ಆವರಣ ಕುಸಿದ ಭಾಗದಲ್ಲಿ ನಾಗರಿ ಕರು ಹಗ್ಗ ಕಟ್ಟಿದ್ದು ಹೊರತುಪಡಿಸಿದರೆ ಇಲ್ಲಿ ಬೇರೆ ಯಾವುದೇ ಸೂಚನಾ ಫಲಕ ಇಡಲಿಲ್ಲ.

RELATED NEWS

You cannot copy contents of this page