ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್ನ ಎಡರಂಗದ ಸೀಟು ಹಂಚಿಕೆ ಕ್ರಮ ಪೂರ್ಣಗೊಂಡಿದೆ ಎಂದು ಎಡರಂಗದ ಕೆ.ಪಿ. ಸತೀಶ್ಚಂದ್ರನ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರಂತೆ ಜಿಲ್ಲಾ ಪಂಚಾಯತ್ನ ಹತ್ತು ಡಿವಿಶನ್ಗಳಲ್ಲಿ ಸಿಪಿಎಂ, ಮೂರರಲ್ಲಿ ಸಿಪಿಐ, ಐಎಲ್ಎಲ್-2, ಕೇರಳ ಕಾಂಗ್ರೆಸ್ (ಎಂ)-1, ಆರ್ಜೆಡಿ-1 ಮತ್ತು ಎನ್ಸಿಪಿ (ಎಸ್)ಗೆ ಒಂದು ಡಿವಿಷನ್ನಲ್ಲಿ ಸ್ಪರ್ಧಿಸಲಿದೆ.
ಚೆರುವತ್ತೂರು, ಕಯ್ಯೂರು, ಮಡಿಕೈ, ಕುಟ್ಟಿಕೋಲ್, ಬೇಕಲ, ಚಿಟ್ಟಾರಿಕಲ್, ಪುತ್ತಿಗೆ, ಕುಂಬಳೆ, ಚೆಂಗಳ, ದೇಲಂಪಾಡಿ ಡಿವಿಷನ್ನಲ್ಲಿ ಸಿಪಿಎಂ ಸ್ಪರ್ಧಿಸಲಿದೆ.
ಬದಿಯಡ್ಕ, ಕುಂಜತ್ತೂರು ಮತ್ತು ಪೆರಿಯ ಡಿವಿಷನ್ಗಳನ್ನು ಸಿಪಿಐಗೆ ನೀಡಲಾಗಿದೆ. ಉಳಿದಂತೆ ಕಳ್ಳಾರ್ನಲ್ಲಿ ಕೇರಳ ಕಾಂಗ್ರೆಸ್ (ಎಂ), ಪಿಲಿಕ್ಕೋಡ್ನಲ್ಲಿ ಆರ್ಜೆಡಿ, ಮಂಜೇಶ್ವರದಲ್ಲಿ ಎನ್ಸಿಪಿ (ಎಸ್), ಕಾಸರಗೋಡು ಸಿವಿಲ್ ಸ್ಟೇಷನ್ ಮತ್ತು ಉದುಮ ಡಿವಿಷನ್ಗಳಲ್ಲಿ ಐಎನ್ಎಲ್ ಸ್ಪರ್ಧಿಸಲಿದೆ.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಂ. ರಾಜಗೋಪಾಲನ್, ಸಿ.ಎಚ್. ಕುಂಞಂಬು, ಅಸೀಸ್ ಕಡಪ್ಪುರಂ, ಸಿ.ಪಿ. ಬಾಬು, ಸಜಿ ಸೆಬಾಸ್ಟಿನ್, ರತೀಶ್ ಪುದಿಯ ಪುರಯಿಲ್ ಮತ್ತು ಅಹಮ್ಮದಲಿ ಕುಂಬಳೆ ಮೊದಲಾದವರು ಭಾಗವಹಿಸಿದರು.







