ನಾಟಕ ನಿರ್ದೇಶಕ ವಿ. ಶಶಿ ನಿಧನ

ಹೊಸದುರ್ಗ: ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಪುರಸ್ಕೃತ ನಾಟಕ ನಿರ್ದೇಶಕ ವಿ. ಶಶಿ (75) ನೀಲೇಶ್ವರ ನಿಧನ ಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಚೆರುಕುನ್ನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ನಾಟಕ ವಲಯದಲ್ಲಿ ಕೈಗೊಂಡ ಸೇವೆ ಪರಿಗಣಿಸಿ ೨೦೨೩ರ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಇವರಿಗೆ ಲಭಿಸಿತ್ತು. ಹಲವಾರು ಖ್ಯಾತ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಮೃತರು ಪತ್ನಿ ಮೋತಿರಾಣಿ, ಮಕ್ಕಳಾದ ಶಾಂತಿ, ಉಣ್ಣಿಕೃಷ್ಣನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page