ಫ್ಯಾಶನ್ ಶೋ ಹೆಸರಲ್ಲಿ ಯುವತಿಯರನ್ನು ದುಬಾಯಿಗೆ ತಲುಪಿಸಿ ಸೆಕ್ಸ್ ರ‍್ಯಾಕೆಟ್‌ಗೆ ಹಸ್ತಾಂತರ: ಮೂವರ ಬಂಧನ

ಕೊಚ್ಚಿ: ಫ್ಯಾಶನ್ ಶೋನಲ್ಲಿ ಭಾಗವಹಿಸಲು ಅವಕಾಶವೊದಗಿಸವು ದಾಗಿ ತಿಳಿಸಿ ಯುವತಿಯರನ್ನು ದುಬಾಯಿಗೆ ತಲುಪಿಸಿ ವೇಶ್ಯಾವಾಟಿಕೆ ಜಾಲಕ್ಕೆ ಒಪ್ಪಿಸುವ ಯುವತಿಯರ  ತಂಡ ಸೆರೆಗೀಡಾಗಿದೆ.

ಆಲುವ  ತೈನೋತ್‌ನ ಕಡವಿಲ್ ರೋಡ್‌ನ ಮನೆಯೊಂದರಲ್ಲಿ  ವಾಸಿಸುವ ಗುರುವಾಯೂರು ತೈಕ್ಕಾಡ್ ನಿವಾಸಿ ಸ್ಟೋಯಿಸಿಟಿ ಮುಟ್ಟತ್ತ್  ಯಾನೆ ಸಿಂಧು (56), ತಿರುವನಂತಪುರ ಕುನ್ನತ್ತುಕಾಲ್ ಮಣ್ಣಂಕೋಡ್ ಪೊಂಙವಿಳ ಜೆಸಿ ವೀಟಿಲ್‌ನ ಅಲೀನ ಎಬ್ರಹಾಂ (23), ಮಲಪ್ಪುರಂ ಪೊನ್ನಾನಿ ಬಿಎಂ ಪುಕ್ಕಯಿಲ್ ವೀಟಿಲ್‌ನ ಮಂಜಿಮ (25) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಫ್ಯಾಶನ್ ಶೋ ಹೆಸರಲ್ಲಿ ಯುವತಿಯರನ್ನು ದುಬಾಯಿಗೆ ಕರೆದೊಯ್ದು  ಬಳಿಕ ಅಲ್ಲಿನ ಬರ್‌ದುಬಾಯಿಯಲ್ಲಿರುವ ಅಲ್ ರಫ ಎಂಬಲ್ಲಿ ಕೇರಳೀಯರ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಸಿಸುವ ಪ್ರದೇಶವೊಂದರ ಪ್ಲಾಟ್‌ಗೆ ಯುವತಿಯರನ್ನು  ತಲುಪಿಸುತ್ತಿರುವುದಾಗಿ  ತನಿಖೆಯಲ್ಲಿ ತಿಳಿದುಬಂದಿದೆ.  ಹೀಗೆ ತಲುಪಿಸುವ ಯುವತಿಯರಿಗೆ ಅಲ್ಲಿ ದೌರ್ಜನ್ಯವೆಸಗುತ್ತಿರುವುದಾಗಿ ಬೆಳಕಿಗೆ ಬಂದಿದೆ.  ಈ ರೀತಿಯಲ್ಲಿ ಆರೋಪಿಗಳ ವಂಚನೆಯಲ್ಲಿ ಸಿಲುಕಿದವರಲ್ಲಿ ೮  ಮಂದಿ ಕೇರಳೀಯ ಯುವತಿಯರು  ಒಳಗೊಂಡಿದ್ದಾರೆನ್ನಲಾಗಿದೆ. ಈ ಮೂಲಕ  ಆರೋಪಿಗಳು ಲಕ್ಷಾಂತರ ರೂಪಾಯಿ ಸಂಪಾದಿಸಿದ್ದಾರೆನ್ನಲಾಗಿದೆ. 

ದುಬಾಯಿಯ ಫ್ಲಾಟ್‌ಗೆ ಯುವತಿಯರನ್ನು ತಲುಪಿಸಿ ಬಳಿಕ ಅವರಿಗೆ ಮಾದಕ ವಸ್ತು ಬೆರೆತ ಪಾನೀಯನೀಡಿ ಪ್ರಜ್ಞೆ ತಪ್ಪಿಸಲಾಗುತ್ತಿದೆ. ಅನಂತರ ಅವರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ.

ಹೀಗೆ ಅಲ್ಲಿಗೆ ತಲುಪುವ ಯುವತಿಯರ ಪಾಸ್ ಪೋರ್ಟ್ ಹಾಗೂ ಫೋನ್‌ಗಳನ್ನು ಆರೋಪಿಗಳು ತಮ್ಮ ವಶದಲ್ಲಿರಿಸು ತ್ತಿದ್ದಾರೆ. ಕಿರುಕುಳ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಬಳಿಕ  ಬೆದರಿಕೆಯೊಡ್ಡಿ ದೌರ್ಜನ್ಯ ಮುಂದುವರಿಸಲಾಗುತ್ತಿದೆ. ಅಲ್ಲದೆ ಲೈಂಗಿಕ ದೃಶ್ಯಗಳನ್ನು ಯುವತಿಯರ ಸಂಬಂಧಿಕರಿಗೂ ಆರೋಪಿಗಳು ಕಳುಹಿಸಿಕೊಡುತ್ತಿದ್ದಾ ರೆನ್ನಲಾಗಿದೆ. ಈ ತಂಡದಿಂದ ಪಾರಾದ ಯುವತಿ ಯೋರ್ವೆ ಊರಿಗೆ ತಲುಪಿ ಮರಡ್ ಪೊಲೀಸರಿಗೆ ದೂರು ನೀಡಿದ್ದಳು. ಈ ಕುರಿತು ಪೊಲೀಸರು ತನಿಖೆ  ನಡೆಸಿ ಮೂವರನ್ನು ಬಂಧಿಸಿ ಸಮಗ್ರ ವಿಚಾರಣೆ ನಡೆಸಿದಾಗಲೇ ಬೆಚ್ಚಿ ಬೀಳಿಸುವ ದೌರ್ಜನ್ಯ ಸಂಗತಿ ಬೆಳಕಿಗೆ ಬಂದಿದೆ. ೮ ಮಂದಿ ಕೇರಳೀಯರಲ್ಲದೆ ಇನ್ನಷ್ಟು ಯುವತಿಯರು    ತಂಡದ ವಂಚನೆಗೆ ಬಲಿಯಾಗಿದ್ದಾರೆಯೇ ಎಂದು ತಿಳಿಯಲು  ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

You cannot copy contents of this page