ಬಿಜೆಪಿ ಮಂಡಲ ಸಮಿತಿಯಿಂದ ತಿರಂಗ ಯಾತ್ರೆ

ಕಾಸರಗೋಡು: ಬಿಜೆಪಿ ಕಾಸರ ಗೋಡು ಮಂಡಲ ಸಮಿತಿ ಆಶ್ರಯದಲ್ಲಿ ತಿರಂಗ ಯಾತ್ರೆ ಆಯೋಜಿಸಲಾಯಿತು. ಕರಂದಕ್ಕಾಡ್‌ನಿಂದ ಪಿಲಿಕುಂಜೆಯ ಲೆಫ್ಟಿನೆಂಟ್ ಕರ್ನಲ್ ಮುಹಮ್ಮದ್ ಹಾಶಿಮ್ ಯುದ್ಧ ಸ್ಮಾರಕಕ್ಕೆ ನಡೆದ ತಿರಂಗ ಯಾತ್ರೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದರು. ಪಿ.ಆರ್. ಸುನಿಲ್ ಮಾತನಾಡಿದರು. ಬಳಿಕ ಮುಹಮ್ಮದ್ ಹಾಶಿಮ್ ಸ್ಮಾರಕದಲ್ಲಿ ಪುಷ್ಪಾರ್ಚನೆ ನಡೆಸಲಾಯಿತು.

ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಮಂಡಲ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸೆಕ್ರೆಟರಿ ದಿವ್ಯಾ, ಪುರುಷೋತ್ತಮನ್, ಶ್ರೀಧರ, ಪ್ರಸನ್ನ ಕಾರಂತ್, ವರಪ್ರಸಾದ್ ಕೋಟೆಕಣಿ, ಜನಪ್ರತಿನಿಧಿಗಳಾದ ಶಾರದಾ, ಶ್ರುತಿ, ಗಣೇಶ್ ಮೀಪುಗುರಿ, ರಾಮಕೃಷ್ಣ ಹೊಳ್ಳ, ರೇಷ್ಮಾ, ಮಾಧವ, ಚಂದ್ರ ಶೇಖರ, ಅನಿಲ್ ಕುಮಾರ್, ನವನೀತ್ ರೈ ಮಾತನಾಡಿದರು.

RELATED NEWS

You cannot copy contents of this page