ಟೋಲ್ ಬೂತ್ ಹೋರಾಟಕ್ಕೆ ಸಂದ ಜಯ: ಯೂತ್ ಲೀಗ್‌ನಿಂದ ನಗರದಲ್ಲಿ ಮೆರವಣಿಗೆ

ಕಾಸರಗೋಡು: ಆರಿಕ್ಕಾಡಿಯ ಟೋಲ್ ಬೂತ್ ನಿಲುಗಡೆಗೊಳಿಸು ವುದಕ್ಕೆ ಬೇಕಾಗಿ ಹೋರಾಟ ನಡೆಸಿದ ಶಾಸಕ ಎಕೆಎಂ ಅಶ್ರಫ್, ಮುಷ್ಕರ ಸಮಿತಿಗೆ ಬೆಂಬಲ ಸೂಚಿಸಿ ಮುಸ್ಲಿಂ ಯೂತ್ ಲೀಗ್ ಕಾಸರಗೋಡು ನಗರಸಭಾ ಸಮಿತಿಯ ನೇತೃತ್ವದಲ್ಲಿ ನಗರದಲ್ಲಿ ಮೆರವಣಿಗೆ ನಡೆಸಲಾಯಿತು. ಮುಸ್ಲಿಂ ಯೂತ್ ಲೀಗ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಹೀರ್ ಆಸಿಫ್, ನಗರಸಭಾ ಅಧ್ಯಕ್ಷ ಮುಸಾಮಿಲ್ ಫಿರ್ದೋಸ್‌ನಗರ್, ಪ್ರಧಾನ ಕಾರ್ಯದರ್ಶಿ ಅನಸ್ ಕಂಡತ್ತಿಲ್, ಕೋಶಾಧಿಕಾರಿ ಸಫ್ವಾನ್ ಅಣಂಗೂರು, ಕಾರ್ಯದರ್ಶಿ ತಾಜು, ಎಂಎಸ್‌ಎಫ್ ಜಿಲ್ಲಾ ಕಾರ್ಯದರ್ಶಿ ನಾಫಿ ಚಾಲ ಸಹಿತ ಹಲವರು ನೇತೃತ್ವ ನೀಡಿದರು.

ಸೇವಾ ಭಾರತಿ ಪುತ್ತಿಗೆ ಘಟಕದಿಂದ ಸೇವಾನಿಧಿಗೆ ಚಾಲನೆ ಸೀತಾಂಗೋಳಿ: ಸೇವಾ ಭಾರತಿ ಪುತ್ತಿಗೆ ಘಟಕದಿಂದ ಸೇವಾನಿಧಿಗೆ ಚಾಲನೆ ನೀಡಲಾಯಿತು. ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಸೇವಾಭಾರತಿ ಕಾರ್ಯದರ್ಶಿ ಉಮಾಲತ ಕೇರಳ ಗ್ರಾಮೀಣ ಬ್ಯಾಂಕ್‌ನ ಮಾಜಿ ವಲಯ ಅಧ್ಯಕ್ಷ ದಾಮೋದರರಿಂದ ಸೇವಾನಿಧಿ ಸ್ವೀಕರಿಸಿ ಚಾಲನೆ ನೀಡಲಾಯಿತು. ಜಿಲ್ಲಾ ಸೇವಾ ಪ್ರಮುಖ್ ಮಂಜುನಾಥ ಕಾರ್ಳೆ ಮುಳ್ಳೇರಿಯ, ಸೇವಾ ಭಾರತಿ ಜಿಲ್ಲಾ ಕಾರ್ಯದರ್ಶಿ ಪ್ರತೀಕ್ ಆಳ್ವ, ಪುತ್ತಿಗೆ ಘಟಕ ಕೋಶಾಧಿಕಾರಿ ಅಪ್ಪಣ್ಣ ಸೀತಾಂಗೋಳಿ, ದಿವಾಕರ ಆಚಾರ್ಯ ಸೀತಾಂಗೋಳಿ, ದಿವ್ಯ ಉಪಸ್ಥಿತರಿದ್ದರು

You cannot copy contents of this page