ಮೀಯಪದವು: ದಿ| ಅಧ್ಯಾಪಕ ಪ್ರಶಾಂತ್ ರೈ ಅವರ ಸ್ಮರಣಾರ್ಥ ಅಧ್ಯಾಪಕರಿಗಾಗಿ ಕ್ರಿಕೆಟ್ ಪಂದ್ಯಾಟ ಮೀಯಪದವು ಶಾಲಾ ಮೈದಾನದಲ್ಲಿ ಜರಗಿತು. ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಉದ್ಘಾಟಿಸಿ ದರು. ಟೀಚರ್ಸ್ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷ ಸಂಜೀವ ಸಿ.ಎಚ್. ಅಧ್ಯಕ್ಷತೆ ವಹಿಸಿದರು. ಗೌರವಾಧ್ಯಕ್ಷ ಸದಾಶಿವ ಪೊಯ್ಯೆ ಪ್ರಶಾಂತ್ ರೈಯವರ ಸಂಸ್ಮರಣೆ ನಡೆಸಿದರು. ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಬಿ, ಜೊತೆ ಕಾರ್ಯದರ್ಶಿ ರಘುವೀರ್, ಉಪಾಧ್ಯಕ್ಷ ಉದಯ ಸಾರಂಗ್ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ವಸಂತ ಎ. ಸ್ವಾಗತಿಸಿ, ಅಧ್ಯಾಪಕ ಸುನಿಲ್ ಕುಮಾರ್ ಎಂ. ವಂದಿಸಿದರು. ಪಂದ್ಯಾಟದಲ್ಲಿ ಜೈಹೋ ಮಾಸ್ಟರ್ಸ್ ಕುಂಬಳೆ ಚಾಂಪ್ಯನ್ ಪಟ್ಟ ಗಳಿಸಿದ್ದು, ಕುಂಬಳೆ ರಂಗಸಂಗಮ ತಂಡ ದ್ವಿತೀಯ ಸ್ಥಾನ ಗಳಿಸಿತು. ವಿಜೇತ ತಂಡಗಳನ್ನು ಗೌರವಿಸಲಾಯಿತು.
