ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆತ್ನಿಸಿದ ವ್ಯಾಪಾರಿ ಮೃತ್ಯು

ಬೋವಿಕಾನ: ಸೀಮೆಎಣ್ಣೆ ಹೊಯ್ದು ಬೆಂಕಿ ಹಚ್ಚಿಕೊಂಡ ವ್ಯಾಪಾರಿ ಮೃತಪಟ್ಟರು. ಬೋವಿಕಾನ ಮುಂಡಕೈಯ ನಿವಾಸಿ ಬಾಲಕೃಷ್ಣನ್ (57) ಮೃತಪಟ್ಟವರು. ಕಳೆದ ಆದಿತ್ಯವಾರ ಇವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಮಧ್ಯೆ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮನೆಗೆ ತರಲಾಗುವುದು. ಮುಂಡಕೈ ಮಳಿಕ್ಕಲ್‌ನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ಮೃತರು ಪತ್ನಿ ಸುಶೀಲ, ಮಕ್ಕಳಾದ ಜಿತೇಶ್ (ಆಟೋ ಚಾಲಕ), ಚೈತನ್ಯ (ಜ್ಯೂನಿಯರ್ ಹೆಲ್ತ್ ಇನ್ಸ್‌ಪೆಕ್ಟರ್), ಅಳಿಯ ಭರತನ್, ಸಹೋದರಿ ರಮಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page