ತಿರುವನಂತಪುರ: ಕೇರಳದಲ್ಲಿ ಗಂಟೆಗೆ 160 ಕಿ.ಮೀ ವೇಗದಲ್ಲಿ ಕ್ರಮಿಸುವ ಏಳು ರೈಲು ಯೋಜನೆಗೆ ಕೇಂದ್ರ ರೈಲ್ವೇ ಸಚಿವಾಲಯ ಅನುಮತಿ ನೀಡಿದೆ.
ಇದರಂತೆ ಶೊರ್ನೂರು-ಮಂಗಳೂರು (307 ಕಿ.ಮೀ), ಕೊಯಂಬತ್ತೂರು-ಶೊರ್ನೂರು (99 ಕಿ.ಮೀ), ಶೊರ್ನೂರು-ಎರ್ನಾಕುಳಂ (106 ಕಿ.ಮೀ), ಎರ್ನಾಕುಳಂ-ಕಾಯಂಕುಳಂ (ಕೋಟ್ಟಯಂ ಮೂಲಕ 115 ಕಿ.ಮೀ), ಕಾಯಂಕುಳಂ-ತಿರುವನಂತಪುರ (105 ಕಿ.ಮೀ), ತಿರುವನಂತಪುರ-ನಾಗರ್‌ಕೋವಿಲ್ (76 ಕಿ.ಮೀ) ಮತ್ತು ಪೊದಾವೂರ್- ಅಂಬಲಪುಳ ಎಂಬೀ ರೈಲು ಅಭಿವೃದ್ಧಿ ಯೋಜನೆಗಳನ್ನು ಕೇರಳದಲ್ಲಿ ಜ್ಯಾರಿಗೊಳಿಸಲಾಗುದೆಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಾಜ್ಯ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಈ ಏಳು ರೈಲು ಯೋಜನೆಗಾಗಿ ಮೂರು ಮತ್ತು ನಾಲ್ಕನೇ ರೈಲು ಹಳಿಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಅಗತ್ಯದ ಸರ್ವೇ ನಡೆಸುವ ಅನುಮತಿಯನ್ನು ನೀಡಲಾಗಿದೆ. ಈ ಹಳಿಗಳ ಅಳವಡಿಕೆ ಕಾಮಗಾರಿ ಪೂರ್ಣಗೊಂಡ ಬಳಿಕ ಈ ರೂಟ್‌ನಲ್ಲಿ 160 ಕಿ.ಮೀ. ವೇಗದಲ್ಲಿ ರೈಲುಗಳು ಸಂಚರಿಸಲಿವೆಯೆಂದು ಸಚಿವರು ತಿಳಿಸಿದ್ದಾರೆ.




