ಚಿಪ್ಪಾರು ಶಾಲೆ ಬಳಿ ಅಪಾಯ ಆಹ್ವಾನಿಸುತ್ತಿದ್ದ ಮರ  ಕಡಿದು ತೆರವು: ದೂರವಾದ ಆತಂಕ

ಉಪ್ಪಳ:  ಮುರಿದು ಬೀಳಬಹುದಾದ ಮಾವಿನ ಬೃಹತ್ ಮರವನ್ನು ತೆರವುಗೊಳಿಸಲಾಗಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್‌ಬಾಗ್-ಕುರುಡಪದವು ರಸ್ತೆಯ ಚಿಪ್ಪಾರು ಶಾಲೆ ಬಳಿಯಲ್ಲಿ ಅಪಾಯಕಾರಿಯಾಗಿ ಪರಿಣಮಿಸಬಹುದಾಗಿದ್ದ ಮರವನ್ನು ವಿದ್ಯುತ್ ಇಲಾಖೆ ತೆರವುಗೊಳಿಸಿದೆ. ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ಯಾವುದೇ ಕ್ಷಣ ಮುರಿದುಬಿದ್ದು ಅಪಾಯ ಸಂಭವಿಸಬಹುದು ಎಂಬ ಬಗ್ಗೆ ‘ಕಾರವಲ್’ ಪತ್ರಿಕೆಯಲ್ಲಿ ಸಚಿತ್ರ ವರದಿ  ಪ್ರಕಟಿಸಲಾಗಿತ್ತು. ಅಲ್ಲದೆ ಸ್ಥಳೀಯರು ವಿದ್ಯುತ್ ಇಲಾಖೆಗೆ ದೂರು ನೀಡಿದ್ದರು. ಈಗ ಈ ಮರವನ್ನು ಕಡಿದು ತೆರವುಗೊಳಿಸಲಾ ಗಿದ್ದು,  ಸ್ಥಳೀಯರ ಆತಂಕ ದೂರವಾಗಿದೆ.

You cannot copy contents of this page