ಕಳನಾಡಿನಲ್ಲಿ ಮಧೂರು ನಿವಾಸಿಗಳಾದ ಇಬ್ಬರಿಗೆ ಆಕ್ರಮಣ: ಕೇಸು ದಾಖಲು

ಕಾಸರಗೋಡು: ಕಳನಾಡು ಖತ್ತರ್ ಸ್ಪೋರ್ಟ್ಸ್ ಫುಟ್ಬಾಲ್ ಟರ್ಫ್‌ನಲ್ಲಿ ಇಬ್ಬರು ಯುವಕರಿಗೆ ಆಕ್ರಮಣ ನಡೆಸಿರುವುದಾಗಿ ದೂರಲಾಗಿದೆ. ಚೆಟ್ಟುಂಗುಳಿ ಕ್ವಾರ್ಟ ರ್ಸ್‌ನ ಕೆ.ಎಂ. ಅಫ್ಸಲ್ (27), ಮಧೂರು ನಿವಾಸಿ ಹನೀಫ (25) ಎಂಬಿವರಿಗೆ ಆಕ್ರಮಿಸ ಲಾಗಿದೆ ಎಂದು ದೂರಲಾಗಿದೆ. ಸೋಮವಾರ ಮಧ್ಯಾಹ್ನ ಘಟನೆ ನಡೆದಿದೆ. ಕೆ.ಎಂ. ಅಫ್ಸಲ್ ಹಾಗೂ ಫುಟ್ಬಾಲ್ ತಂಡದ ಮೆನೇಜರ್ ಹನೀಫ್‌ರಿಗೆ ಆಕ್ರಮಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಳನಾಡು ಕೀಯೂರಿನ ಸಾದಿಕ್, ಅಂದಾಯಿ, ಸನ, ಅಫ್ರೀದ್, ತಬ್ಶೀರ್, ಪಚ್ಚು, ಉವೈಸ್, ಆಶಿಂ, ಮಾಹಿನ್ ಎಂಬಿವರ ವಿರುದ್ಧ  ಕೇಸು ದಾಖಲಿಸಿದ್ದಾರೆ.

You cannot copy contents of this page