ಕಾಸರಗೋಡು: ಎರಡು ಬಾರಿ ಕೈತಪ್ಪಿ ಹೋದ ರಾಜ್ಯ ಆಡಳಿತವನ್ನು ಈ ಬಾರಿಯಾದರೂ ಮರಳಿ ವಶಪಡಿಸಲು ಕಾಂಗ್ರೆಸ್ ಸಹಿತ ಯುಡಿಎಫ್ ದೃಢ ನಿರ್ಧಾರ ಕೈಗೊಂ ಡಿದ್ದು, ಅದಕ್ಕಾಗಿ ತೀವ್ರ ಪ್ರಯತ್ನ ನಡೆಸುತ್ತಿದೆ. ಈ ಬಾರಿ ಆಡಳಿತ ಹಿಡಿಯಲು ಸಾಧ್ಯವಾಗದಿದ್ದಲ್ಲಿ ಒಕ್ಕೂಟಕ್ಕೆ ಭಾರೀ ಸವಾಲು ಎದು ರಾಗಲಿದೆ ಎಂಬ ಆತಂಕ ಹುಟ್ಟಿ ಕೊಂಡಿದೆ. ಇದೇ ವೇಳೆ ಸ್ಥಳೀಯಾ ಡಳಿತ ಚುನಾವಣೆಯಲ್ಲಿ ಲಭಿಸಿದ ಗೆಲುವು ಯುಡಿಎಫ್‌ನ ಈಗಿನ ನಿರ್ಧಾರಕ್ಕೆ ಶಕ್ತಿ ತುಂಬುತ್ತಿದೆ. ರಾಜ್ಯದ ಉತ್ತರದ ತುದಿಯಲ್ಲಿರುವ ಮಂಜೇ ಶ್ವರ, ಕಾಸರಗೋಡು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿಯೂ ಗೆಲುವು ನಮ್ಮದೇ ಆಗಿರಲಿದೆ ಎಂಬ ವಿಶ್ವಾಸ ವನ್ನು ಮುಸ್ಲಿಂ ಲೀಗ್ ಸಹಿತ ಯುಡಿಎಫ್ ಹೊಂದಿದೆ. ಜಿಲ್ಲೆಯ ಉಳಿದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉದುಮ ಹಾಗೂ ತೃಕರಿಪುರದಲ್ಲಿ ತೀವ್ರ ಸ್ಪರ್ಧೆ ನಡೆಸಿದರೆ ಅವುಗಳನ್ನು ವಶಪಡಿಸಲು ಸಾಧ್ಯವಿದೆ ಎಂದೂ ಕಾಂಗ್ರೆಸ್ ಲೆಕ್ಕಹಾಕಿದೆ.
ಉದುಮ ಮಂಡಲದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಗೆಲುವಿನ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಇಲ್ಲಿ ಈ ಬಾರಿ ಅಭ್ಯರ್ಥಿಗಳಾಗಿ ಬಿ.ಪಿ. ಪ್ರದೀಪ್ ಕುಮಾರ್, ಹಕೀಂ ಕುನ್ನಿಲ್ ಎಂಬಿವರ ಹೆಸರುಗಳ ಈ ಮೊದಲೇ ಕೇಳಿ ಬಂದಿದೆ. ಆದರೆ ಪ್ರಸ್ತುತ ಶಾಸಕರಾಗಿರುವ ಸಿ.ಎಚ್. ಕುಂಞಂಬು ಅವರೇ ಎಡರಂಗ ಅಭ್ಯರ್ಥಿಯಾದಲ್ಲಿ ಯುಡಿಎಫ್‌ಗೆ ಗೆಲುವು ಸಾಧ್ಯತೆ ಕಡಿಮೆ ಎಂದು ಕಾಂಗ್ರೆಸ್ ಲೆಕ್ಕ ಹಾಕಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಸ್ತುತ ಕಾಸರಗೋಡು ಸಂಸದರಾದ ರಾಜ್‌ಮೋಹನ್ ಉಣ್ಣಿತ್ತಾನ್‌ರನ್ನು ಕಣಕ್ಕಿಳಿಸಿ ಈ ಮಂಡಲದಲ್ಲಿ ಗೆಲುವು ಸಾಧಿಸಲಿರುವ ಪ್ರಯತ್ನವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಉದುಮದಲ್ಲಿ ಗೆಲುವು ಸಾಧಿಸಿ ರಾಜ್ಯದಲ್ಲಿ ಆಡಳಿತ ಲಭಿಸಿದಲ್ಲಿ ರಾಜ್‌ಮೋಹನ್ ಉಣ್ಣಿತ್ತಾನ್‌ರನ್ನು ಸಚಿವರನ್ನಾಗಿಸಲು ಕೂಡಾ ಉದ್ದೇಶಿ ಸಲಾಗಿದೆ. ಈ ಲೆಕ್ಕಾಚಾರಗಳು ಯಶಸ್ವಿಯಾದರೆ ಕಾಸರಗೋಡು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸಾಧನೆಗೈಯ್ಯಲು ಸಾಧ್ಯವಿದೆ ಎಂದು ಕಾಂಗ್ರೆಸ್ ಮೂಲಗಳು ಅಭಿ ಪ್ರಾಯಪಟ್ಟಿವೆ.
ಕಾಞಂಗಾಡ್ ಹಾಗೂ ತೃಕರಿ ಪುರದಲ್ಲಿ ಪ್ರಮುಖರನ್ನು ಕಣಕ್ಕಿಳಿಸಲು ಪ್ರಯತ್ನ ಆರಂಭಿಸಿರುವುದಾಗಿ ತಿಳಿದು ಬಂದಿದೆ. ಮುಸ್ಲಿಂ ಲೀಗ್‌ನ ಪ್ರಮು ಖರಾದ ಜಿಲ್ಲಾ ಪದಾಧಿ ಕಾರಿಗಳಲ್ಲಿ ಒಬ್ಬರನ್ನು ಅಭ್ಯರ್ಥಿಯಾಗಿಸ ಲಾಗುವುದೆಂಬ ಸೂಚನೆಯಿದೆ. ವಿಧಾನಸಭಾ ಚುನಾವಣೆಗಿರುವ ಸಿದ್ಧತೆಗಳನ್ನು ಯುಡಿಎಫ್ ಈಗಾಗಲೇ ಆರಂಭಿಸಿರುತ್ತದೆ.







